Home » Belthangady: ಅಕ್ರಮವಾಗಿ ಮೊಬೈಲ್ ಸಿಮ್ ಸಂಗ್ರಹಿಸಿ ಈ ವಂಚಕರು ಏನ್ ಮಾಡ್ತಿದ್ರು..? ಬೆಳ್ತಂಗಡಿಯ ಇಬ್ಬರು ಕಂಬಿ ಹಿಂದೆ

Belthangady: ಅಕ್ರಮವಾಗಿ ಮೊಬೈಲ್ ಸಿಮ್ ಸಂಗ್ರಹಿಸಿ ಈ ವಂಚಕರು ಏನ್ ಮಾಡ್ತಿದ್ರು..? ಬೆಳ್ತಂಗಡಿಯ ಇಬ್ಬರು ಕಂಬಿ ಹಿಂದೆ

15 comments

Belthangady: ಮೋಸ ಹೋಗುವವರು ಇರುವಷ್ಟು ದಿನ ಮೋಸ ಮಾಡುವವರಿಗೆ ಹಬ್ಬ. ತಮ್ಮ ಸುತ್ತ ಮುತ್ತ ಇರುವ ಪರಿಚಯದವರ ಗೆಳೆತನ ಸಂಪಾದಿಸಿ ಅವರ ಹೆಸರಿನಲ್ಲಿ ಸಿಮ್ ಪಡೆಯುತ್ತಿದ್ದ ಇಬ್ಬರು ಖದೀಮರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಸಿಮ್ ಪಡೆದು ಇವರು ಏನು ಮಾಡುತ್ತಿದ್ರು ಅನ್ನೋದನ್ನು ತಿಳಿದರೆ ನೀವು ಶಾಕ್ ಆಗುತ್ತೀರಿ. ವಿದೇಶದಲ್ಲಿ ಕಾರ್ಯಚರಿಸುವ ಸೈಬರ್ ವಂಚಕರಿಗೆ ಈ ಸಿಮ್ಮಗಳನ್ನು ಮಾರಾಟ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.

 

ಈ ಖತರ್ನಾಕ್ ಕೆಲಸವನ್ನು ಮಾಡುತ್ತಿದ್ದವರು ಬೆಳ್ತಂಗಡಿಯ ನಿವಾಸಿಗಳಾದ ಬಿಬಿಎ ವಿದ್ಯರ್ಥಿ್ ಶಹಾದ್ ಮೊಹಮ್ಮದ್ ಸಮೀರ್ (21), ಮೊಹಮ್ಮದ್ ಅಜೀಮ್ (19) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವಂಚಕರಿಂದ ಬರೋಬ್ಬರಿ 86 ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದಲ್ಲದೆ 5.49 ಲಕ್ಷ ರುಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಮರೋಳಿ ಗ್ರಾಮದ ಬಿರ್ನದಕಟ್ಟೆ ಬಜ್ಜೋಡಿಯಲ್ಲಿ ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದರು. ಇಲ್ಲಿಂದ ಅವರು ಈ ವಂಚನೆ ಕೆಲಸಕ್ಕೆ ಕೈ ಹಾಕಿದ್ದು, ಈ ಹುಡುಗರು ಭಾರಿ ಪ್ರಮಾಣದ ಸಿಮ್ ಕಾರ್ಡ್ಗಳನ್ನು ಸಂಗ್ರಹಿಸಿದ್ದರು. ಆರೋಪಿಗಳನ್ನು ವಿಚಾರಿಸಿದಾಗ ಅವರು, ಬೆಳ್ತಂಗಡಿಯ ಮುಸ್ತಾಫ ಹಾಗೂ ಮಡಂತ್ಯಾರ್ನ ಸಾಜೀದ್ ಹೇಳಿದಂತೆ ಈ ಕೃತ್ಯ ಮಾಡುತ್ತಿದ್ದರು ಎಂದು ಬಾಯಿ ಬಿಟ್ಟಿದ್ದಾರೆ. ಆರೋಪಿಗಳಿಂದ ಸಿಮ್ ಕಾರ್ಡ್, 3 ಮೊಬೈಲ್ ಫೋನ್, ಚಟುವಟಿಕೆಗೆ ಬಳಸಿದ್ದ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

You may also like

Leave a Comment