Home » Andrapradesh: ಮಾಜಿ ಸಿಎಂ ಎಗ್ ಪಪ್ಸ್ ಹಗರಣ ಬಯಲು – 5 ವರ್ಷಗಳಲ್ಲಿ ಬರೀ ಎಗ್ ಪಪ್ಸ್ ತಿನ್ನಲೆಂದೇ 3.6 ಕೋಟಿ ಖರ್ಚು ಮಾಡಿದ್ರಾ ಜಗನ್ ಮೋಹನ್ ರೆಡ್ಡಿ ?!

Andrapradesh: ಮಾಜಿ ಸಿಎಂ ಎಗ್ ಪಪ್ಸ್ ಹಗರಣ ಬಯಲು – 5 ವರ್ಷಗಳಲ್ಲಿ ಬರೀ ಎಗ್ ಪಪ್ಸ್ ತಿನ್ನಲೆಂದೇ 3.6 ಕೋಟಿ ಖರ್ಚು ಮಾಡಿದ್ರಾ ಜಗನ್ ಮೋಹನ್ ರೆಡ್ಡಿ ?!

2 comments
Andrapradesh

Andrapradesh: ಆಂಧ್ರಪ್ರದೇಶದಲ್ಲಿ ಕಳೆದ ಸಲ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಟಿಡಿಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಮಾಜಿ ಸಿಎಂ YSRC ಪಕ್ಷದ ನಾಯಕ ಜಗನ್ ಮೋಹನ್ ರೆಡ್ಡಿ ಅವರ ಗ್ರಹಚಾರ ಯಾಕೋ ಕೆಟ್ಟಿದೆ ಅನಿಸುತ್ತದೆ. ಯಾಕೆಂದರೆ ಒಂದರ ಹಿಂದೆ ಒಂದಂತೆ ಚಂದ್ರಬಾಬು ನಾಯ್ಡು ಸರ್ಕಾರ ಜಗನ್ ಮಾಡಿದ ಭ್ರಷ್ಟಾಚಾರವನ್ನು ಬಯಲು ಮಾಡುತ್ತಿದೆ. ಅಂತೆಯೇ ಇದೀಗ ವಿಚಿತ್ರ ಉರುಳೊಂದನ್ನು ಜಗನ್ ಮೋಹನನ ಕುಣಿಕೆಗೆ ಎಸೆದ ಆಡಳಿತ ಸರ್ಕಾರ ‘ಎಗ್ ಪಪ್ಸ್ ‘ ಹಗರಣವನ್ನು ಬಯಲಿಗೆಳೆಯಹೊರಟಿದೆ.

ಹೌದು, ಆಂಧ್ರಪ್ರದೇಶದಲ್ಲಿ (Andhra Pradesh) ಈ ಬಾರಿ ಎನ್​ಡಿಎ ಸರ್ಕಾರ (NDA Government) ಅಧಿಕಾರ ಬಂದಿದ್ದು, ಕಳೆದ ಐದು ವರ್ಷಗಳಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಮತ್ತು ಸಿಎಂ ಕಚೇರಿ ಸಿಬ್ಬಂದಿ (CMO) ತಮ್ಮ ಸ್ಥಾನ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಹಲವಾರು ಆರೋಪಗಳ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತಿದೆ. ಅಲ್ಲದೆ ಇವುಗಳ ತನಿಖೆಗೂ ಮುಂದಾಗಿದೆ. ಅಂತೆಯೇ ಇದೀಗ ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮೊಟ್ಟೆ ಪಫ್ ನೀಡಲು ಕಳೆದ ಐದು ವರ್ಷಗಳಲ್ಲಿ ಸರ್ಕಾರ 3.62 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂಬುದು ಬೆಳಕಿಗೆ ಬಂದಿದೆ.

ಅಂದರೆ ಸಿಎಂ ಕಚೇರಿ ಸಿಬ್ಬಂದಿಗೆ ಮೊಟ್ಟೆ ಪಫ್ಸ್​ಗಾಗಿಯೇ ಸರ್ಕಾರವು ವರ್ಷಕ್ಕೆ ಸರಾಸರಿ 72 ಲಕ್ಷಗಳನ್ನು ಖರ್ಚು ಮಾಡಿದೆ. ಇದರರ್ಥ ಸಿಎಂಒ ಸಿಬ್ಬಂದಿ ಪ್ರತಿದಿನ 993 ಎಗ್ ಪಫ್‌ಗಳನ್ನು ತಿಂದಿ ತೇಗಿದ್ದಾರೆ. ಐದು ವರ್ಷಗಳಲ್ಲಿ ಒಟ್ಟು 18 ಲಕ್ಷ ಎಗ್ ಪಫ್‌ಗಳನ್ನು ಜಗನ್​ ಕಚೇರಿಯ ಸಿಬ್ಬಂದಿ ಸೇವಿಸಿದ್ದಾರೆ ಎಂದು ಹೊಸ ಸರ್ಕಾರ ದಾಖಲೆ ಬಿಡುಗಡೆ ಮಾಡಿದೆ. ಸರ್ಕಾರದ ಹಣದ ದುಂದುವೆಚ್ಚ ಅಂದರೆ ಇದೇ ಅಲ್ಲವೇ ಎಂದು ಹೊಸ ಸರ್ಕಾರ ಪ್ರಶ್ನೆ ಮಾಡಿದೆ.

ಸಿಎಂಒ ಸಿಬ್ಬಂದಿಗೆ ಎಗ್‌ ಪಫ್‌ ಖರೀದಿಸಲು ಮಾಡಿದ ದುಂದುವೆಚ್ಚದ ಬಗ್ಗೆ ಆಘಾತಕಾರಿ ಸುದ್ದಿ ಬಹಿರಂಗವಾಗುತ್ತಿದ್ದಂತೆ, ಐದು ವರ್ಷಗಳಲ್ಲಿ ಜಗನ್ ಮೋಹನ್ ರೆಡ್ಡಿಯ ಇತರ ಐಷಾರಾಮಿಗಳಿಗೆ ಸರ್ಕಾರದ ಹಣವನ್ನು ಬೇರೆಡೆಗೆ ತಿರುಗಿಸಿದ ಆರೋಪಗಳೂ ಕೇಳಿ ಬಂದಿವೆ. ಬರೀ ಎಗ್ ಪಫ್ ನೀಡುವುದಕ್ಕಾಗಿ ಇಷ್ಟೊಂದು ಖರ್ಚು ಮಾಡಿರುವುದು ರಾಜ್ಯದ ಜನತೆಗೆ ಆಘಾತವನ್ನು ಉಂಟುಮಾಡಿದೆ. ಜನಸಾಮಾನ್ಯರ ಹಣವನ್ನು ಈ ರೀತಿಯಾಗಿ ವಂಚನೆ ಮಾಡಲಾಗಿದೆ ಎಂದು ಸರ್ಕಾರ ಟೀಕಿಸಿದೆ. ಇದೀಗ ಎಗ್ ಪಫ್ ವರದಿಯು ದೊಡ್ಡ ವಿವಾದವನ್ನು ಸೃಷ್ಟಿಸುತ್ತಿದೆ.

You may also like

Leave a Comment