Home » Bihar: ಆಟಿಕೆ ವಸ್ತುವೆಂದು ಜೀವಂತ ಹಾವನ್ನು ಕಚ್ಚಿದ ಮಗು! ವಿಡಿಯೋ ವೈರಲ್

Bihar: ಆಟಿಕೆ ವಸ್ತುವೆಂದು ಜೀವಂತ ಹಾವನ್ನು ಕಚ್ಚಿದ ಮಗು! ವಿಡಿಯೋ ವೈರಲ್

1 comment

Bihar: ಸಣ್ಣ ಮಕ್ಕಳು ಕೈಗೆ ಸಿಕ್ಕ ವಸ್ತುಗಳ ಜೊತೆಗೆ ಆಟ ಆಡೋದು, ಸಿಕ್ಕ ಸಿಕ್ಕ ವಸ್ತುಗಳನ್ನು ಕಚ್ಚೋದು ಇದೆಲ್ಲಾ ಸಾಮಾನ್ಯ. ಆದ್ರೆ ಇಲ್ಲೊಂದು ಮಗು ಆಟವಾಡುವ ವಸ್ತು ಎಂದು ಜೀವಂತ ಹಾವನ್ನೇ ಕಚ್ಚಿ ಬಿಟ್ಟಿದೆ. ಹೌದು, ಮನೆಯಲ್ಲಿ ಆಟವಾಡುತ್ತಿದ್ದ ಮಗು, ತೆವಲಿಕೊಂಡು ಬಂದ ಹಾವನ್ನು ಆಟಿಕೆ ಅಂದುಕೊಂಡು ಬಾಯಿಗೆ ಹಾಕಿಕೊಂಡು ಜಗಿದು ಕೊಂದು ಹಾಕಿದೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಬಿಹಾರದ (Bihar) ಗಯಾದ ಫತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಮುಹರ್ ಗ್ರಾಮದಲ್ಲಿ ಒಂದು ವರ್ಷದ ಮಗು ಮನೆಯ ಟೆರೇಸ್ ಮೇಲೆ ಆಟವಾಡುತ್ತಿತ್ತು. ಅಷ್ಟರಲ್ಲಿ ಸಣ್ಣ ಹಾವೊಂದು ಆಹಾರ ಅರಸಿಕೊಂಡು ಬಂದಿದೆ. ಇತ್ತ ಹಾವನ್ನು ನೋಡಿದ ಮಗು ಆಟಿಕೆ ಎಂದು ಕೊಂಡು ಸ್ವಲ್ಪ ಹೊತ್ತು ಆಟವಾಡಿ ನಂತರ ಹಾವಿನ ಮಧ್ಯ ಭಾಗವನ್ನು ಬಾಯಿಗೆ ಹಾಕಿಕೊಂಡು ಜಗಿದು ಕೊಂದೇ ಬಿಟ್ಟಿದೆ. ಹೌದು, ಮಗುವಿನ ಬಾಯಿಯಲ್ಲಿ ಹಲ್ಲುಗಳು ಬಂದಿದ್ದರಿಂದ ಹಾವು ಸಾವನ್ನಪ್ಪಿದೆ.

https://twitter.com/gharkekalesh/status/1825865682447380509?ref_src=twsrc%5Etfw%7Ctwcamp%5Etweetembed%7Ctwterm%5E1825865682447380509%7Ctwgr%5Ebfe080942a2a5a7012dd183388bf08258839ee75%7Ctwcon%5Es1_c10&ref_url=http%3A%2F%2Fapi-news.dailyhunt.in%2F

ಅಷ್ಟರಲ್ಲಿ ಮಗುವಿನ ತಾಯಿ ಅಲ್ಲಿಗೆ ಬಂದು ಆ ದೃಶ್ಯ ನೋಡಿ ಬೆಚ್ಚಿಬಿದ್ದು, ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಓಡಿದ್ದರು. ನಂತರ ಆಸ್ಪತ್ರೆಯ ಅಧಿಕಾರಿಗಳು ಮಗುವಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿದಾಗ ಮಗು ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.

You may also like

Leave a Comment