Home » Kolkata: ಕಾಮ ಪಿಶಾಚಿಗಳೇ, ತಡೆಯಲಾಗದ ಕಾಮವಿದ್ದರೇ ಸೀದಾ ರೆಡ್ ಲೈಟ್ ಏರಿಯಾಗೆ ಬನ್ನಿ, ದಯವಿಟ್ಟು ಅತ್ಯಾಚಾರ ಮಾಡಬೇಡಿ – ಲೈಂಗಿಕ ಕಾರ್ಯಕರ್ತೆಯ ಹೇಳಿಕೆ ವೈರಲ್

Kolkata: ಕಾಮ ಪಿಶಾಚಿಗಳೇ, ತಡೆಯಲಾಗದ ಕಾಮವಿದ್ದರೇ ಸೀದಾ ರೆಡ್ ಲೈಟ್ ಏರಿಯಾಗೆ ಬನ್ನಿ, ದಯವಿಟ್ಟು ಅತ್ಯಾಚಾರ ಮಾಡಬೇಡಿ – ಲೈಂಗಿಕ ಕಾರ್ಯಕರ್ತೆಯ ಹೇಳಿಕೆ ವೈರಲ್

0 comments
Kolkata

Kolkata: ಕೊಲ್ಕತಾ ನಗರದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ (RG Kar Hospital) ನಡೆದ ವೈದ್ಯೆಯ ಬರ್ಬರ ಅತ್ಯಾಚಾರ ಹಾಗೂ ಕೊಲೆ (Kolkata Doctor Murder Case) ಪ್ರಕರಣ ಇಡೀ ದೇಶಾದ್ಯಂತ ಭಾರೀ ಸದ್ದು ಮಾಡಿದೆ. ಈ ಕೇಸ್ ಕುರಿತು ಇದೀಗ ಭಯಾನಕ ಸತ್ಯಗಳು ಹೊರಬೀಳುತ್ತಿವೆ. ಈ ನಡುವೆ ಪ್ರಕರಣಕ್ಕೆ ಕಾರಣವಾದ ಹಾಗೂ ಸದಾ ಅತ್ಯಾಚಾರ ಎಸಗುವ ಕಾಮುಕ ಪಾಪಿಗಳಿಗೆ ರೆಡ್ ಲೈಟ್ ಏರಿಯಾದ ಮಹಿಳೆಯೊಬ್ಬರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಆಕೆ ಈ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ ನೆಟ್ಟಿಗರ ಹೃದಯಗಳನ್ನು ಗೆದ್ದಿದ್ದಾರೆ.

ಹೌದು, ನಿನಗೆ ಹೆಂಗಸಿನ ಮೇಲೆ ಅಷ್ಟೊಂದು ವ್ಯಾಮೋಹವಿದ್ದರೆ ನಮ್ಮ ಬಳಿಗೆ ಬಾ, ತಡೆಯಲಾರದ ಕಾಮವಿದ್ದರೆ ರೆಡ್ ಲೈಟ್ ಏರಿಯಾಗಿ ಬನ್ನಿ. ಆದರೆ ದಯವಿಟ್ಟು ಮಹಿಳೆಯರ ಜೀವನವನ್ನು ಹಾಳು ಮಾಡಬೇಡಿ. ಅತ್ಯಾಚಾರದಂತ ಕೀಚಕ ಕೃತ್ಯ ನಡೆಸುವ ಮೂಲಕ ಅವರ ಜೀವನವನ್ನು ನಾಶಪಡಿಸಬೇಡಿ ಎಂದು ಆ ಮಹಿಳೆ ಕಣ್ಣೀರ ಕರೆದಿದ್ದಾರೆ.

ಈ ಕುರಿತು ಮಾತನಾಡಿರುವ ಅವರು “ನಿಮಗೆ ಕಾಮವನ್ನು ತಡೆಯಾಲಗದಿದ್ದರೆ ಕೊಲ್ಕತ್ತಾದಲ್ಲಿ ಇಷ್ಟು ದೊಡ್ಡ ರೆಡ್ ಲೈಟ್ ಏರಿಯಾ(Red Light Aria) ಇದೆ. ಅಲ್ಲಿಗೆ ಬನ್ನಿ ನಾವು ನಿಮ್ಮ ದಾಹವನ್ನು ಕಡಿಮೆ ಮಾಡ್ತೀವಿ. ನಾವು ಅನಿವಾರ್ಯ ಕಾರಣದಿಂದಾಗಿ ಈ ವೃತ್ತಿಗೆ ಬಂದಿದ್ದೇವೆ. ಪಾಪ ಅಮಾಯಕ ಹೆಣ್ಣು ಮಕ್ಕಳನ್ನು ಯಾಕೆ ಹತ್ಯೆ ಮಾಡ್ತೀರ ಎಂದು ಆಕ್ರೋಶದಿಂದ ಮಾತನಾಡಿದ್ದಾರೆ. ಸದ್ಯ ಲೈಂಗಿಕ ಕಾರ್ಯಕರ್ತೆಯ ಈ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದೆ.

ಮುಂದುವರೆದು ಮಾತನಾಡಿದ ಅವರು, ನೀವು ಹಣ ಪಾವತಿಸಿದರೆ ನಿಮ್ಮ ಲೈಂಗಿಕ ಅಗತ್ಯಗಳನ್ನು ಪೂರೈಸಲು ರೆಡ್ ಲೈಟ್ ಏರಿಯಾದಲ್ಲಿ ಮಹಿಳೆಯರು (ನಾವು) ಸಹಕರಿಸಲು ಸಿದ್ಧರಿದ್ದಾರೆ. ನಾವು ಇಲ್ಲಿ ಇಷ್ಟು ದೊಡ್ಡ ಕೆಂಪು ದೀಪ ಪ್ರದೇಶವನ್ನು ಹೊಂದಿದ್ದೇವೆ. ನೀವು ಇಲ್ಲಿಗೆ ಬರಬಹುದು. ಇಲ್ಲಿ 20-50 ರೂ.ಗೆ ಕೆಲಸ ಮಾಡುವ ಹುಡುಗಿಯರು ಇದ್ದಾರೆ. ಆದ್ದರಿಂದ, ದಯವಿಟ್ಟು ಕೆಲಸಕ್ಕೆ ಹೋಗುವ ಹುಡುಗಿಯರನ್ನು ಗುರಿಯಾಗಿಸಬೇಡಿ. ನಾವು ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ ಎಂದು ಅವರು ಹೇಳಿದರು.

You may also like

Leave a Comment