Home » Bank Holiday: ಸೆಪ್ಟೆಂಬರ್ ನಲ್ಲಿ 8 ದಿನ ಬ್ಯಾಂಕ್ ಗಳಿಗೆ ರಜೆ !! ಇಲ್ಲಿದೆ ಪಟ್ಟಿ

Bank Holiday: ಸೆಪ್ಟೆಂಬರ್ ನಲ್ಲಿ 8 ದಿನ ಬ್ಯಾಂಕ್ ಗಳಿಗೆ ರಜೆ !! ಇಲ್ಲಿದೆ ಪಟ್ಟಿ

8 comments
Bank Holiday

Bank Holiday: ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಕರ್ನಾಟಕದ ಬ್ಯಾಂಕ್ ಗಳಿಗೆ ಒಟ್ಟು 8 ದಿನ ರಜೆ(Bank Holiday) ಇರಲಿದೆ. ರಜೆಯ ಕುರಿತು ಪಟ್ಟಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ನೀವು ಯಾವುದಾದರಾ ಪ್ರಮುಖ ಬ್ಯಾಂಕ್‌ ಕೆಲಸಗಳಿದ್ದರೆ, ಬ್ಯಾಂಕ್‌ಗೆ ತೆರಳುವ ಮೊದಲು ಬ್ಯಾಂಕ್‌ ರಜಾ ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ.

ಕರ್ನಾಟಕದಲ್ಲಿ 2024ರ ಸೆಪ್ಟಂಬರ್​ ನ ಬ್ಯಾಂಕ್ ರಜಾ ದಿನಗಳು :
ಸೆಪ್ಟಂಬರ್ 7, ಶನಿವಾರ: ವಿನಾಯಕ ಚತುರ್ಥಿ
ಸೆಪ್ಟಂಬರ್ 8: ಭಾನುವಾರದ ರಜೆ
ಸೆಪ್ಟಂಬರ್ 14: ಎರಡನೇ ಶನಿವಾರ
ಸೆಪ್ಟಂಬರ್ 15: ಭಾನುವಾರದ ರಜೆ
ಸೆಪ್ಟಂಬರ್ 16, ಸೋಮವಾರ: ಈದ್ ಮಿಲಾದ್
ಸೆಪ್ಟಂಬರ್ 22: ಭಾನುವಾರದ ರಜೆ
ಸೆಪ್ಟಂಬರ್ 28: ನಾಲ್ಕನೇ ಶನಿವಾರ
ಸೆಪ್ಟಂಬರ್ 29: ಭಾನುವಾರದ ರಜೆ

ಅಂದಹಾಗೆ ಎಲ್ಲಾ ಬ್ಯಾಂಕ್(Bank) ರಜಾದಿನಗಳು ಮತ್ತು ವಾರಾಂತ್ಯಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ತುರ್ತು ವಹಿವಾಟುಗಳಿಗಾಗಿ ಬ್ಯಾಂಕ್‌ಗಳ ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಅಥವಾ ಎಟಿಎಂ (ATM)ಗಳನ್ನು ಬಳಸಿ ಗ್ರಾಹಕರು ತಮ್ಮ ಬ್ಯಾಂಕಿಂಗ್ ಕಾರ್ಯಗಳನ್ನು ಅನುಕೂಲಕರವಾಗಿ ನಿರ್ವಹಿಸಬಹುದು.

You may also like

Leave a Comment