Home » Hindu girls target: ಹಿಂದೂ ಯುವತಿಯರ ಮೇಲಿನ ದೌರ್ಜನ್ಯ ಪೂರ್ವಯೋಜಿತ ಕೃತ್ಯ: ಲವ್ ಜಿಹಾದ್ ಇದಕ್ಕೂ ಸಂಬಂಧದ ಥಳಕು – ವಿ.ಸುನೀಲ್‍ಕುಮಾರ್

Hindu girls target: ಹಿಂದೂ ಯುವತಿಯರ ಮೇಲಿನ ದೌರ್ಜನ್ಯ ಪೂರ್ವಯೋಜಿತ ಕೃತ್ಯ: ಲವ್ ಜಿಹಾದ್ ಇದಕ್ಕೂ ಸಂಬಂಧದ ಥಳಕು – ವಿ.ಸುನೀಲ್‍ಕುಮಾರ್

0 comments
Hindu girls target

Hindu girls target: ಹಿಂದೂ ಯುವತಿಯರ ಮೇಲಿನ ದೌರ್ಜನ್ಯ ಸಂಬಂಧ ರಾಜ್ಯ ಸರಕಾರ ಮತ್ತು ಸಂಬಂಧಿತ ಜಿಲ್ಲಾಡಳಿತ ಉಗ್ರ ಕ್ರಮ ತೆಗೆದುಕೊಳ್ಳಬೇಕು. ಗ್ಯಾಂಗನ್ನು ಪತ್ತೆ ಹಚ್ಚಿ ಎಲ್ಲ ಆರೋಪಿಗಳ ವಿರುದ್ಧ ತೀವ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‍ಕುಮಾರ್ ಅವರು ಆಗ್ರಹಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯುವತಿಗೆ ಧೈರ್ಯ ತುಂಬುವ ಕಾರ್ಯವನ್ನು ಜಿಲ್ಲಾಡಳಿತ ಮಾಡಬೇಕು. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರಕಾರ ಭರಿಸಬೇಕು; ಇಂಥ ಘಟನೆಗಳು ಆಗದಂತೆ ಸಾಧ್ಯವಿರುವ ಎಲ್ಲ ಎಚ್ಚರಿಕೆ ಕ್ರಮಗಳನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಹಿಂದೂ ಯುವತಿಯರ ಮೇಲೆ ದೌರ್ಜನ್ಯ, ಅತ್ಯಾಚಾರ ಘಟನೆಗಳು ನಡೆಯುತ್ತಿದ್ದು ಇದೊಂದು ಪೂರ್ವಯೋಜಿತ ಕೃತ್ಯ ಎಂದು ಕಳವಳ ವ್ಯಕ್ತಪಡಿಸಿದರು. ಇಂಥ ಘಟನೆಗಳು ಪುನರಾವರ್ತನೆ ಆಗುತ್ತಿರುವುದು ಆತಂಕಕಾರಿ ಎಂದು ನುಡಿದರು. ಅಮಲು ಪದಾರ್ಥ ಖರೀದಿಸಿ ಯುವತಿಗೆ ನೀಡಿ ಅಪಹರಿಸಿ ದುಷ್ಕøತ್ಯ ನಡೆಸಿದ್ದಾರೆ. ಇದು ಒಬ್ಬಿಬ್ಬರ ಕೃತ್ಯದಂತಿಲ್ಲ. ಇದೆಲ್ಲ ಪೂರ್ವಯೋಜಿತ. ಹಿಂದೆ ಲವ್ ಜಿಹಾದ್ ಶಬ್ದ ಬಳಸಿ ಜಾಗೃತಿ ಮಾಡುತ್ತಿದ್ದು, ಈ ಘಟನೆ ಅದಕ್ಕೆ ಥಳಕು ಹಾಕುವಂತಿದೆ ಎಂದು ತಿಳಿಸಿದರು.

ಹಿಂದೂ ಯುವತಿಯರನ್ನೇ ಗುರಿಯಾಗಿ ಮಾಡಿಕೊಂಡ ಇಂಥ ದುಷ್ಕøತ್ಯಗಳ ಬಗ್ಗೆ ಒಂದು ದೊಡ್ಡ ಜನಜಾಗೃತಿ ಆಂದೋಲನವನ್ನು ಮಾಡಲು ಯೋಜಿಸಿದ್ದೇವೆ ಎಂದು ಅವರು ತಿಳಿಸಿದರು. ಯುವತಿಯರು ಆಸೆ, ಆಮಿಷಕ್ಕೆ ಬಲಿಯಾಗಿ ಪದೇಪದೇ ದುರಂತ ನಡೆಯುತ್ತಿದೆ. ಇದು ನಮ್ಮ ಸಮಾಜಕ್ಕೆ ಆತಂಕಕಾರಿ ಎಂದು ನುಡಿದರು. ಲವ್ ಜಿಹಾದ್ ವಿಚಾರದಲ್ಲಿ ದೊಡ್ಡ ಹೋರಾಟವನ್ನೂ ನಡೆಸಲಾಗುವುದು ಎಂದು ಅವರು ಹೇಳಿದರು.

You may also like

Leave a Comment