Home » Uttar Pradesh: ಏನಿದು ವಿಚಿತ್ರ.. ರಾತ್ರಿಯಾದ್ರೆ ಬೆತ್ತಲಾಗ್ತಾಳೆ, ರಸ್ತೆಯಲ್ಲೆಲ್ಲಾ ಓಡ್ತಾಳೆ, ಸಿಕ್ಕವರ ಮನೆ ಬಾಗಿಲು ಬಡಿಯುತ್ತಾರೆ !! ಮುಂದೇನಾಯ್ತೆಂದು ನೀವೆ ನೋಡಿ

Uttar Pradesh: ಏನಿದು ವಿಚಿತ್ರ.. ರಾತ್ರಿಯಾದ್ರೆ ಬೆತ್ತಲಾಗ್ತಾಳೆ, ರಸ್ತೆಯಲ್ಲೆಲ್ಲಾ ಓಡ್ತಾಳೆ, ಸಿಕ್ಕವರ ಮನೆ ಬಾಗಿಲು ಬಡಿಯುತ್ತಾರೆ !! ಮುಂದೇನಾಯ್ತೆಂದು ನೀವೆ ನೋಡಿ

0 comments
Uttar Pradesh

Uttar Pradesh: ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗೋ ಕೆಲವು ವಿಡಿಯೋಗಳು ನಿಜಕ್ಕೂ ಅಚ್ಚರಿಗೆ ಕಾರಣವಾಗ್ತಾವೆ. ಅವು ಏನೆಂದೂ ಅರ್ಥ ಆಗೋಲ್ಲ. ನೋಡುಗರಾದ ನಮಗೇ ತಲೆ ಚಿಟ್ ಹಿಡಿಸುತ್ತೆ. ಒಮ್ಮೊಮ್ಮೆ ಮರುಕ ಹುಟ್ಟಿಸುತ್ತೆ, ಅಸಹ್ಯ ಎನಿಸುತ್ತೆ. ಅಂತೆಯೇ ಇದೀಗ ಅಂತದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ವೀಕ್ಷಕರಿಗೆ ವಿಚಿತ್ರ ಕುತೂಹಲ ಹುಟ್ಟಿಸುತ್ತೆ.

ಹೌದು, ಉತ್ತರ ಪ್ರದೇಶದ(Uttar Pardesh) ರಾಂಪುರ(Rampura) ಜಿಲ್ಲೆಯ ಮಿಲಾಕ್‌ʼನಲ್ಲಿ ನಡೆದ ವಿಚಿತ್ರ ಮತ್ತು ಆಘಾತಕಾರಿ ಘಟನೆಯ ವೈರಲ್‌ ವಿಡಿಯೋ ಆಗಿದೆ. ಈ ವೀಡಿಯೊವನ್ನು @AtalTv_UP ಹೆಸರಿನ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದ್ದು, ಇದನ್ನು ಕಂಡು ಪೋಲೀಸರೂ ದಂಗಾಗಿದ್ದಾರೆ.

ಅಂದಹಾಗೆ ಈ ವಿಡಿಯೋದಲ್ಲಿ ರಾತ್ರಿಯಾಗುತ್ತಿದ್ದಂತೆ ಒಬ್ಬ ಮಹಿಳೆ ಮೈಮೇಲೆ ಒಂದು ತುಂಡು ಬಟ್ಟೆಯಿಲ್ಲದೆ ಬೆತ್ತಲೆಯಾಗಿ ರಸ್ತೆಯುದ್ದಕ್ಕೂ ಓಡಾಡ್ತಾ ಇದ್ದಾಳೆ. ಅಷ್ಟೇ ಅಲ್ಲದೆ, ಕಂಡಕಂಡ, ಸಿಕ್ಕ ಸಿಕ್ಕ ಮನೆಗಳ ಬಾಗಿಲನ್ನು ಬಡಿಯುತ್ತಿದ್ದಾಳೆ. ಈ ದೃಶ್ಯಗಳು ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೈರಲ್ ಆಗುತ್ತಿರುವ ಈ ವಿಡಿಯೋ ರಾತ್ರಿ 1 ಗಂಟೆಯ ಸುಮಾರಿಗೆ ನಡೆದಿದೆ ಎನ್ನಲಾಗಿದೆ. 1 ನಿಮಿಷ 39 ಸೆಕೆಂಡ್ʼಗಳ ಈ ವಿಡಿಯೋ ನೋಡಿದಾಗ ಮಹಿಳೆಯೊಬ್ಬಳು ಸಂಪೂರ್ಣ ಬೆತ್ತಲೆಯಾಗಿರುವುದು ಕಂಡು ಬರುತ್ತದೆ. ಆಕೆಯ ವಿಚಿತ್ರ ನಡೆ ಎಲ್ಲರಿಗೂ ತಲೆ ಕಡೆಸಿದೆ. ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂಬುದೂ ಯಾರಿಗೂ ತಿಳಿದಿಲ್ಲ. ಸದ್ಯ ಪೋಲೀಸರು ಇದರ ವಿಚಾರಣೆಯ ಜಾಡು ಹಿಡಿದಿದ್ದಾರೆ.

 

You may also like

Leave a Comment