Home » Bye meaning: Bye ಬೈ ಪದದ ನಿಜವಾದ ಅರ್ಥ ಏನು ಗೊತ್ತಾ ?

Bye meaning: Bye ಬೈ ಪದದ ನಿಜವಾದ ಅರ್ಥ ಏನು ಗೊತ್ತಾ ?

2 comments
Bye meaning

Bye, Good bye ಅನ್ನುವ ಪದಗಳನ್ನು ನಾವು ಆಗಾಗ ಕೇಳುತ್ತಲೇ ಬಳಸುತ್ತಲೇ ಇರುತ್ತೇವೆ. ಯಾರೇ ನೆಂಟರು ಗೆಳೆಯರು ನಮ್ಮನ್ನು ಬಿಟ್ಟು ಹೋಗುವಾಗ – ಅದು ಆ ದಿನದ ಮಟ್ಟಿಗೆ ಇರಬಹುದು ಅಥವಾ ಪರ್ಮನೆಂಟ್ ಆಗಿ ದೂರ ಹೋಗುವ ಸಂದರ್ಭ ಬಂದಾಗ ಬೈ, ಗುಡ್ ಬೈ ಹೇಳುತ್ತಿರುತ್ತೇವೆ. ಬಾಯ್ ಅನ್ನುವುದು ಸ್ವತಂತ್ರ ಪದವೇ ಅಥವಾ ಯಾವುದಾದರೂ ಪದ ಸಮೂಹಗಳ, ವಾಕ್ಯಗಳ ಶಾರ್ಟ್ ಫಾರಂನಾ ಎಂದು ತಿಳಿದುಕೊಳ್ಳುವ ಸಮಯವಿದು.

Bye ಪದದ ಫುಲ್ ಫಾರ್ಮ್ ಏನು ?
BYE ಯ ಪೂರ್ಣ ರೂಪ ಇಲ್ಲಿದೆ. BYE ಎಂಬ ಪದವು ಗುಡ್‌ಬೈ ಎಂಬ ಪದದ ಒಂದು ಸಣ್ಣ ರೂಪವಾಗಿದೆ ಎಂದು ಹೆಚ್ಚಿನ ಜನರು ನಂಬುತ್ತಾರೆ. Bye ಪದವನ್ನು ಸಾಮಾನ್ಯವಾಗಿ ಸ್ನೇಹಿತರಿಗೆ, ಸಹೋದ್ಯೋಗಿ ಅಥವಾ ಸಾಮಾನ್ಯ ಜನರಿಗೆ ವಿದಾಯ ಹೇಳುವಾಗ ಬಳಸಲಾಗುತ್ತದೆ. ಆಶ್ಚರ್ಯಕರವಾಗಿದೆ ಅಲ್ಲವೇ? BYE ಪದದ ಅರ್ಥ “ಪ್ರತಿ ಸಮಯ ನಿಮ್ಮೊಂದಿಗೆ ಇರುವೆ” ಎಂಬುದಾಗಿದೆ. Be with You Every time (Bye)

ಬಾಯ್ ಮತ್ತು ಗುಡ್ ಬೈ ಅನ್ನುವ ಪದಗಳನ್ನು ಆಗಾಗ ಬಳಸಲಾಗುತ್ತದೆ. ಇದು ಯಾರು ಯಾರಿಗೆ ಹೇಳುತ್ತಾರೆ ಮತ್ತು ಹೇಳುವ ಸಂದರ್ಭವನ್ನು ಅವಲಂಬಿಸಿರುತ್ತದೆ. ಇಂಗ್ಲಿಷ್‌ನಲ್ಲಿ BYE ಯ ಈ ಪೂರ್ಣ ರೂಪವನ್ನು ನೈಜ-ಜೀವನದ ಸಂದರ್ಭಗಳಲ್ಲಿ ಅದೂ ಅಗಲಿಕೆಯ ಸಂದರ್ಭದಲ್ಲಿ, ದಿನದ ಕೊನೆಯಲ್ಲಿ ಸದ್ಯೋಗಿಗಳಿಂದ ಗೆಳೆಯಾ ಗೆಳತಿಯರಿಂದ ಆ ದಿನಕ್ಕೆ ವಿದಾಯ ಹೇಳುವ ಸಂದರ್ಭದಲ್ಲಿ ಬಳಸಲಾಗುತ್ತದೆ. ಕೆಲವು ಬಾರಿ ಕೋಪದಲ್ಲಿ ಗುಡ್ ಬೈ ಅನ್ನಲಾಗುತ್ತದೆ. GOOD BYE ಅನ್ನುವ ಬಳಕೆ ಶುಭ ವಿದಾಯ ಅಂತಲೂ ಮತ್ತೆ ಕೆಲವು ಬಾರಿ ಪರ್ಮನೆಂಟ್ ವಿದಾಯ ಎನ್ನುವುದನ್ನು ಸೂಚಿಸಲು ಬಳಸಲಾಗುತ್ತದೆ. ಗುಡ್ ಬೈ ಪದ ಬಳಕೆಯನ್ನು ‘ನಿನ್ನನ್ನು ಇನ್ನೊಂದು ಬಾರಿ ಭೇಟಿಯಾಗಲು ಇಚ್ಛಿಸುವುದಿಲ್ಲ’ ಎನ್ನುವುದನ್ನು ಸೂಚಿಸಲು ಕೂಡ ಬಳಸಲಾಗುತ್ತದೆ. ಸದ್ಯಕ್ಕೆ ಒಂದು ವಿರಾಮ, ಒಂದು Bye. ಮತ್ತೆ ಸಿಗೋಣ.

You may also like

Leave a Comment