Petrol Bunk ಗಳಲ್ಲಿ ವಾಹನ ಸವಾರರಿಗೆ ಮೋಸ ಮಾಡುವ ಪದ್ದತಿ ಇಂದು ನಿನ್ನೆಯದಲ್ಲ. ಒಂದಲ್ಲ ಒಂದು ವಿಚಾರದಲ್ಲಿ ಗ್ರಾಹಕರನ್ನು ಯಾಮಾರಿಸುತ್ತಲೇ ಇರುತ್ತಾರೆ. ಅಂತೆಯೇ ಇದೀಗ ನಾವು ಹೇಳ ಹೊರಟಿರುವ ವಿಚಾರವೂ ಇದೆ. ನಿಮ್ಮಮನ್ನು ಹೀಗೂ ಮೋಸ ಮಾಡುತ್ತಾರೆ, ಹುಷಾರಾಗಿರಿ ಎಂದು ತಿಳಿಸಿಕೊಡುತ್ತಿದ್ದೇವೆ.
ಮೊದಲು ನೀವು ಇನ್ಮುಂದೆ ನೀವು ಪೆಟ್ರೋಲ್(Petrol Bunk) ಪಂಪ್ಗೆ ಹೋದಾಗಲೆಲ್ಲಾ, 100, 200 ಅಥವಾ 500, 1000 ರೂಪಾಯಿ ಮೌಲ್ಯದ ತೈಲವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಯಾಕೆಂದರೆ ಈ ನಂಬರ್ ತುಂಬಾ ಸಾಮಾನ್ಯ. ಅಂದರೆ ಹೆಚ್ಚಿನ ಗ್ರಾಹಕರು ಇದೇ ಬೆಲೆಯ ಪೆಟ್ರೋಲ್ ಹಾಕಿಸತ್ತಾರೆ. ಹೀಗಾಗಿ ಪಂಪ್ ಗಳಲ್ಲಿ ಅಂತಹ ಮೊತ್ತವನ್ನು ಹಾಕುವ ಮೂಲಕ ತೈಲದ ಪ್ರಮಾಣವನ್ನು ಈಗಾಗಲೇ ಸೆಟ್ ಮಾಡಿಕೊಂಡಿರುತ್ತಾರೆ. ಹೀಗಾಗಿ ನೀವು ₹ 100 ತೈಲವನ್ನು ಹಾಕಿದರೆ, ತೈಲವನ್ನು ಈಗಾಗಲೇ ನಿಗದಿಪಡಿಸಿದ ಪ್ರಮಾಣದಲ್ಲಿ ನೀಡಲಾಗುತ್ತದೆ. ಸೋ ನೀವು ಯಾವಾಗಲೂ 104, 215, 525, 1011 ನಂತಹ ಮೊತ್ತದ ತೈಲವನ್ನು ಹಾಕಿಸಿಕೊಳ್ಳಬೇಕು.
ಇನ್ನು ಪೆಟ್ರೋಲ್- ಡೀಸೆಲ್ ತುಂಬಲು ನೀವು ಪೆಟ್ರೋಲ್ ಪಂಪ್ ಗೆ ಹೋದಾಗಲೆಲ್ಲಾ, ಮೀಟರ್ ನಲ್ಲಿ ಶೂನ್ಯವನ್ನು ಪರಿಶೀಲಿಸುವ ಮೂಲಕ ಮಾತ್ರ ಯಾವಾಗಲೂ ಪೆಟ್ರೋಲ್ ಡೀಸೆಲ್ ಖರೀದಿಸಿ. ಅನೇಕ ಬಾರಿ ಮೀಟರ್ ಶೂನ್ಯದಲ್ಲಿರುವುದಿಲ್ಲ ಮತ್ತು ಪೆಟ್ರೋಲ್ ಸಿಬ್ಬಂದಿ ಈಗಾಗಲೇ ಇರುವ ಮೀಟರ್ ನಿಂದ ನಿಮ್ಮ ಟ್ಯಾಂಕ್ ನಲ್ಲಿರುವ ಎಣ್ಣೆಯನ್ನು ತುಂಬಿಸುತ್ತಾರೆ, ಅದನ್ನು ನೀವು ಪಾವತಿಸಬೇಕಾಗುತ್ತದೆ. ಹೀಗಾಗಿ ಈ ಎರಡೂ ವಿಚಾರದಲ್ಲಿ ನೀವು ತುಂಬಾ ಜಾಗರೂಕರಾಗಿರುವುದು ಒಳಿತು.
