Home » Roopesh shetty: ಮೂರು ಹೆಣ್ಣು ಮಕ್ಕಳ ತಾಯಿ ಪಾಲಿಗೆ ದೇವರಾದ ರೂಪೇಶ್ ಶೆಟ್ಟಿ!

Roopesh shetty: ಮೂರು ಹೆಣ್ಣು ಮಕ್ಕಳ ತಾಯಿ ಪಾಲಿಗೆ ದೇವರಾದ ರೂಪೇಶ್ ಶೆಟ್ಟಿ!

0 comments
Roopesh shetty

Roopesh shetty: ಕನ್ನಡ ಬಿಗ್‌ಬಾಸ್ ಸೀಸನ್ 10ರಲ್ಲಿ ಖ್ಯಾತಿ ಪಡೆದಿರುವ ರೂಪೇಶ್ ಶೆಟ್ಟಿ (Roopesh shetty) ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಕರಾವಳಿಯ ಸೊಗಡಿನಲ್ಲಿ ಬೆಳೆದ ಇವರು ಇತ್ತೀಚಿಗೆ ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಂತೆಯೇ ತಮ್ಮ ಹುಟ್ಟು ಹಬ್ಬದ ದಿನ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಮನೆ ನಿರ್ಮಾಣದ ಭರವಸೆ ನೀಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು, ಮಂಗಳೂರಿನ ನಗರವೊಂದರಲ್ಲಿ ಸೋರುತ್ತಿದ್ದ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಮೂರು ಹೆಣ್ಣು ಮಕ್ಕಳ ತಾಯಿಯ ಕಷ್ಟಕ್ಕೆ ನಟ ರೂಪೇಶ್ ಶೆಟ್ಟಿ ಅವರು ಸ್ಪಂದಿಸಿ, ಅವರಿಗೆ ಮನೆ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ನೆರವಾಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

“ಹಾಯ್ ಎಲ್ಲರಿಗೂ ನಮಸ್ಕಾರ, ಈ ಬಾರಿಯ ಬರ್ತಡೇಯನ್ನು ಬೇರೆ ರೀತಿ, ಒಳ್ಳೆಯ ಉದ್ದೇಶದೊಂದಿಗೆ ಆಚರಿಸಲು ಬಯಸುತ್ತೇನೆ. ತುಂಬಾ ಕಷ್ಟದಲ್ಲಿರುವ ಕುಟುಂಬಕ್ಕೆ, ಮಳೆ ಬಂದಾಗ ತುಂಬಾ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಡಬೇಕೆಂಬ ನಿರ್ಧಾರವನ್ನು ನಾನು ಮತ್ತು ನನ್ನ ತಂಡ ನಿರ್ಧಾರವನ್ನು ಕೈಗೊಂಡಿದ್ದೇವೆ” ಎಂದು ಹೇಳಿಕೊಂಡಿದ್ದಾರೆ.

ಹಾಗೆಯೇ ಬರ್ತಡೇ ದಿವಸ ನಾವೆಲ್ಲ ತುಂಬಾ ಖರ್ಚು ಮಾಡುತ್ತೇವೆ. ಸಮಾಜದಲ್ಲಿ ನಮ್ಮ ಸುತ್ತ ಮುತ್ತ ತುಂಬಾ ಜನ ಸಹಾಯದ ನಿರೀಕ್ಷೆಯಲ್ಲೂ ಇರುತ್ತಾರೆ. ಅಂತವರಿಗೆ ಕೈಯಲ್ಲಿ ಆಗುವಷ್ಟು ಸಹಾಯವನ್ನು ನೀವು ಕೂಡಾ ಮಾಡಿ ಎಂದು ಮನವಿ ಮಾಡಿದ್ದಾರೆ.

You may also like

Leave a Comment