Home » Old vehicle: ಹಳೆ ವಾಹನ ನೀಡಿ ಹೊಸ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಸೇಲ್! ಇಲ್ಲಿದೆ ನೋಡಿ ಧಮಾಕ ಆಫರ್!

Old vehicle: ಹಳೆ ವಾಹನ ನೀಡಿ ಹೊಸ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಸೇಲ್! ಇಲ್ಲಿದೆ ನೋಡಿ ಧಮಾಕ ಆಫರ್!

1 comment
Old vehicle

Old vehicle: ವಾಹನ ತಯಾರಿಕಾ ಕಂಪನಿಗಳು, ಹಬ್ಬದ ಆರಂಭದಲ್ಲೇ ಗ್ರಾಹಕರಿಗೆ ಉತ್ತಮ ಆಫರ್‌ ಒಂದನ್ನು ತಂದಿದೆ. ಹೌದು, ಒಂದು ವೇಳೆ ನೀವು ನಿಮ್ಮ ಹಳೆ ವಾಹನವನ್ನು ಗುಜರಿಗೆ ಹಾಕಿದರೆ, ಹೊಸ ವಾಹನದ ಖರೀದಿ ವೇಳೆ ಶೇ.1.5ರಿಂದ ಶೇ.3ರವರೆಗೂ ರಿಯಾಯಿತಿ ನೀಡುವುದಾಗಿ ಕಂಪನಿಗಳು ಘೋಷಣೆ ಮಾಡಿವೆ.

ಮುಖ್ಯವಾಗಿ ಮಾಲಿನ್ಯ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ಹಳೆಯ ವಾಹನಗಳನ್ನು(Old vehicle) ನಿಗದಿತ ಗುಜರಿ ಕೇಂದ್ರಗಳಿಗೆ ಹಾಕಿ ಅದಕ್ಕೆ ಪ್ರಮಾಣಪತ್ರ ನೀಡುವ ನೀತಿ ಜಾರಿಗೆ ತಂದಿದೆ. ಈಗಾಗಲೇ ಕಳೆದ 6 ತಿಂಗಳಲ್ಲಿ ತಮ್ಮ ವಾಹನವನ್ನು ಗುಜರಿಗೆ ಹಾಕಿದ್ದಲ್ಲಿ ವ್ಯಕ್ತಿಗಳು ಈ ಹೊಸ ರಿಯಾಯಿತಿ ಆಫರ್‌ ಪಡೆದುಕೊಳ್ಳಬಹುದು ಎಂದು ವಾಹನ ತಯಾರಿಕಾ ಕಂಪನಿಗಳ ಜೊತೆ ಸಭೆ ನಡೆಸಿದ ಬಳಿಕ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಪ್ರಕಟಿಸಿದ್ದಾರೆ.

ಸದ್ಯ ಪ್ರಯಾಣಿಕ ವಾಹನ ತಯಾರಿಕಾ ಕಂಪನಿಗಳಾದ ಹ್ಯುಂಡೈ, ಕಿಯಾ, ಟೊಯೋಟಾ, ಹೊಂಡಾ, ಮಾರುತಿ, ಟಾಟಾ, ಮಹೀಂದ್ರಾ, ಎಂಜಿ ಹೆಕ್ಟರ್‌, ರೆನಾಲ್ಟ್‌, ನಿಸ್ಸಾನ್‌, ಸ್ಕೋಡಾ ಕಂಪನಿಗಳು ಶೇ.15ರಷ್ಟು ಅಥವಾ 20000 ರು. ಪೈಕಿ ಯಾವುದು ಕಡಿಮೆಯೋ ಅದನ್ನು ನೀಡುವುದಾಗಿ ಪ್ರಕಟಿಸಿವೆ. ಇನ್ನು ಮರ್ಸಿಡಿಸಿ ಬೆಂಜ್‌ 25000 ರು. ಡಿಸ್ಕೌಂಟ್‌ ಆಫರ್‌ ಮುಂದಿಟ್ಟಿದೆ.

ಅಲ್ಲದೆ ದುಬಾರಿ ಸರಕು ಸಾಗಣೆ ವಾಹನ ತಯಾರಿಕಾ ಕಂಪನಿಗಳಾದ ಟಾಟಾ, ವೋಲ್ವೋ, ಮಹೀಂದ್ರಾ, ಅಶೋಕ್‌ ಲೇಲ್ಯಾಂಡ್, ಫೋರ್ಸ್‌ ಮೋಟಾರ್ಸ್‌, ಇಸುಜು ಕಂಪನಿಗಳು 3.5 ಟನ್‌ಗಿಂತ ಹೆಚ್ಚಿನ ತೂಕದ ವಾಹನಗಳಿಗೆ ಶೇ.3ರಷ್ಟು ರಿಯಾಯ್ತಿ ನೀಡಲಿದೆ.

You may also like

Leave a Comment