Home » General Knowledge Questions: ಈ ಪ್ರಾಣಿ ಬಾಯಿಂದ ಮರಿಗೆ ಜನ್ಮ ನೀಡುತ್ತೆ! ಯಾವ ಪ್ರಾಣಿ ಗೆಸ್ ಮಾಡಿ

General Knowledge Questions: ಈ ಪ್ರಾಣಿ ಬಾಯಿಂದ ಮರಿಗೆ ಜನ್ಮ ನೀಡುತ್ತೆ! ಯಾವ ಪ್ರಾಣಿ ಗೆಸ್ ಮಾಡಿ

0 comments
General Knowledge Questions

General Knowledge Questions: ಎಷ್ಟೇ ಬುದ್ದಿವಂತರು ಆಗಿದ್ದರು ಕೂಡಾ ಕೆಲವೊಮ್ಮೆ ಸಾಮಾನ್ಯ ಜ್ಞಾನ ಪ್ರಶ್ನೆಗಳ (General Knowledge Questions) ಮುಂದೆ ನಾವು ಸೋತು ಬಿಡುತ್ತೇವೆ. ಅದಕ್ಕಾಗಿ ನಮ್ಮ ಸಾಮಾನ್ಯ ಜ್ಞಾನವು ಚೆನ್ನಾಗಿರಬೇಕು.

ನಿಮಗೆ ಗೊತ್ತಾ? ಈ ಕೆಳಗಿನ ಪ್ರಶ್ನೆ ಉತ್ತರವನ್ನು ಸರ್ಕಾರಿ ಉದ್ಯೋಗದ ಸಂದರ್ಶನದಲ್ಲಿ ಅಭ್ಯರ್ಥಿಯನ್ನು ಕೇಳಲಾದ ಪ್ರಶ್ನೆಯೂ ಹೌದು. ಬನ್ನಿ ಅಂತಹ ಪ್ರಶ್ನೆ ಯಾವುದು ಎಂದು ಇಲ್ಲಿ ತಿಳಿಯಿರಿ.

ಈ ಪ್ರಪಂಚದಲ್ಲಿರುವ ಪ್ರತಿಯೊಂದು ಪ್ರಾಣಿಯು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದೆ. ಕೆಲವು ಪ್ರಾಣಿಗಳು ಮೊಟ್ಟೆಗಳನ್ನು ಇಡುತ್ತವೆ. ಆದರೆ ಕೆಲವು ಪ್ರಾಣಿಗಳು ನೇರ ಸಂತತಿಯನ್ನು ಅಂದರೆ ಮರಿಗಳಿಗೆ ಜನ್ಮ ನೀಡುತ್ತವೆ. ಆದ್ರೆ ಜಗತ್ತಿನಲ್ಲಿ ತಮ್ಮ ಬಾಯಿಯ ಮೂಲಕ ಜನ್ಮ ನೀಡುವ ಸಾಮರ್ಥ್ಯವಿರುವ ಪ್ರಾಣಿಗಳಿವೆ. ಯಾವುದು ಗೊತ್ತಾ? ಬನ್ನಿ ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಬಾಯಿಯ ಮೂಲಕ ಜನ್ಮ ನೀಡುವ ಸಾಮರ್ಥ್ಯವಿರುವ ಪ್ರಾಣಿ ಎಂದರೆ ಗ್ಯಾಸ್ಟ್ರಿಕ್ ಬ್ರೂಡಿಂಗ್ ಕಪ್ಪೆ. ಇದು ತನ್ನ ಬಾಯಿಯ ಮೂಲಕ ಮರಿಗೆ ಜನ್ಮ ನೀಡುವ ಏಕೈಕ ಪ್ರಾಣಿಯಾಗಿದೆ.

ಗ್ಯಾಸ್ಟ್ರಿಕ್ ಬ್ರೂಡಿಂಗ್ ಕಪ್ಪೆ 1980 ರ ದಶಕದ ಮಧ್ಯಭಾಗದಲ್ಲಿ ನಿರ್ನಾಮವಾಯಿತು. ಇದನ್ನು ಸಾಮಾನ್ಯವಾಗಿ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಭಾಗದಲ್ಲಿ ಕಾಣಿಸಿಕೊಂಡಿತ್ತು. ಪ್ರಸ್ತುತ, ವಿಜ್ಞಾನಿಗಳು ಈ ಕಪ್ಪೆ ಜಾತಿಯನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ.

ಯಾವ ದೇಶದಲ್ಲಿ ಒಂದೇ ಒಂದು ಸೊಳ್ಳೆ ಇಲ್ಲ?

ಆ ದೇಶದ ಹೆಸರು ಐಸ್ಲ್ಯಾಂಡ್. ಹೌದು, ಸೊಳ್ಳೆಗಳು, ಕೀಟಗಳು, ಹಾವುಗಳಿಲ್ಲದ ದೇಶ ಇದು. ಇದರ ನೆರೆಯ ನಾರ್ವೆ, ಡೆನ್ಮಾರ್ಕ್, ಸ್ಕಾಟ್ಲೆಂಡ್ ಮತ್ತು ಗ್ರೀನ್ಲ್ಯಾಂಡ್ ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆ ಸೊಳ್ಳೆಗಳನ್ನು ಹೊಂದಿದೆ.

ಸೊಳ್ಳೆ ಒಮ್ಮೆಗೆ ಎಷ್ಟು ರಕ್ತ ಹೀರಬಲ್ಲದು ಗೊತ್ತಾ?

ಸೊಳ್ಳೆಗಳು ಸಾಮಾನ್ಯವಾಗಿ ತಮ್ಮ ದೇಹ ತೂಕದ ಮೂರು ಪಟ್ಟು ರಕ್ತವನ್ನು ಕುಡಿಯಬಹುದು. ಸೊಳ್ಳೆಗಳ ಸರಾಸರಿ ತೂಕ 6 ಮಿಗ್ರಾಂ ಇರುತ್ತದೆ.

ಯಾವ ಪ್ರಾಣಿ ಕಣ್ಣು ಮುಚ್ಚಿದರೂ ಎಲ್ಲವನ್ನೂ ನೋಡಬಲ್ಲದು? ಈ ಪ್ರಶ್ನೆಗೆ ಉತ್ತರ ಒಂಟೆ. ಮುಖ್ಯವಾಗಿ ಒಂಟೆಗಳ ಆವಾಸಸ್ಥಾನವು ಮುಖ್ಯವಾಗಿ ಮರುಭೂಮಿ ಪ್ರದೇಶವಾಗಿದೆ. ಅಲ್ಲಿ ಧೂಳಿನ ಪ್ರಮಾಣ ಅತಿ ಹೆಚ್ಚು. ಆದ್ದರಿಂದ ಒಂಟೆಗೆ ಒಂದಲ್ಲ ಮೂರು ಅಕ್ಷಿಪಲ್ಲಬ್ ಅಥವಾ ರೆಪ್ಪೆಗಳಿವೆ. ನಡುವೆ 2 ರೆಪ್ಪೆಗಳ್ನು ಮುಚ್ಚಿದ್ದರೂ ಸಹ, ಒಂಟೆಗಳು ಹೊರಗಿನ ವಸ್ತುಗಳನ್ನು ಸುಲಭವಾಗಿ ನೋಡಬಹುದು.

ಇನ್ನು ಒಂಟೆಗಳು ಮಾತ್ರವಲ್ಲ ಆಕ್ಟೋಪಸ್, ಗೂಬೆ, ಬಾವಲಿಯಂತಹ ಹಲವಾರು ಪ್ರಾಣಿಗಳು ಈ ಅದ್ಭುತ ಸಾಮರ್ಥ್ಯವನ್ನು ಹೊಂದಿವೆ.

You may also like

Leave a Comment