Home » Elephant attack: ಬೆಳ್ಳಂಬೆಳಗ್ಗೆ ಆನೆ ದಾಳಿ: ವೃದ್ಧೆ ಸಾವು

Elephant attack: ಬೆಳ್ಳಂಬೆಳಗ್ಗೆ ಆನೆ ದಾಳಿ: ವೃದ್ಧೆ ಸಾವು

0 comments
Elephant attack

Elephant attack: ಕೊಡಗಿನ(Kodagu) ಸಿದ್ದಾಪುರ ತಾಲೂಕಿನ ಪಾಲಿಬೆಟ್ಟ ಸಮೀಪದ ಚೆನ್ನಯ್ಯನ ಕೋಟೆಯಲ್ಲಿ ಅಲ್ಲಿನ ನಿವಾಸಿ ಕತಾಯಿ (72)ಎಂಬವರು ತನ್ನ ಮಗನ ಮನೆಯಿಂದ ಹೊರ ಬರುತ್ತಿರುವ ಸಂದರ್ಭ ದಿಢೀರ್ ಆಗಿ ಕಾಡಾನೆ(Elephant attack) ಒಂದು ದಾಳಿ ನಡೆಸಿ ಸ್ಥಳದಲ್ಲಿ ವೃದ್ಧೆ ಸಾವನಪ್ಪಿದ್ದಾಳೆ(Death). ಸ್ಥಳಕ್ಕೆ ಅರಣ್ಯ ಇಲಾಖೆ(Forest Department) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುದ್ದಿ ತಿಳಿದ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಸಂಕೇತ್ ಪೂವಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ವಿವರ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತುರ್ತಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಕೂಡಲೇ ಇದಕ್ಕೊಂದು ಪರಿಹಾರವನ್ನು ನೀಡುವಂತೆ ಘಟನಾ ಸ್ಥಳದಲ್ಲಿದ್ದ ಗ್ರಾಮಸ್ಥರು ಸಂಕೇತ್ ಪೂವಯ್ಯ ನವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

You may also like

Leave a Comment