Home » Darshan: ದರ್ಶನ್‌ಗೆ ರಾಜಾತಿಥ್ಯ ಪ್ರಕರಣ; ಜೈಲಿನಲ್ಲಿ ಬಿಗಿಗೊಂಡ ನಿಯಮ; ಖೈದಿಗಳ ಪ್ರತಿಭಟನೆ

Darshan: ದರ್ಶನ್‌ಗೆ ರಾಜಾತಿಥ್ಯ ಪ್ರಕರಣ; ಜೈಲಿನಲ್ಲಿ ಬಿಗಿಗೊಂಡ ನಿಯಮ; ಖೈದಿಗಳ ಪ್ರತಿಭಟನೆ

0 comments
Bellary Jail

Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗಿರುವ ನಟ ದರ್ಶನ್‌ ಬರುತ್ತಿದ್ದಂತೆ, ಇದೀಗ ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಇದರಿಂದ ಖೈದಿಗಳಿಗೆ ದೊರಕುತ್ತಿದ್ದ ಮತ್ತು ಏರಿಸುವ ವಸ್ತು ಬಂದ್‌ ಆಗಿದೆ. ಹೀಗಾಗಿ ಬೆಳಗಾವಿಯ ಹಿಂಡಲಗಾ ಜೈಲು ಖೈದಿಗಳು ವಿಶೇಷ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ಮಾಡಿದ್ದಾರೆ.

ಬೀಡಿ, ಸಿಗರೇಟ್‌, ತಂಬಾಕು ನೀಡುವ ಖೈದಿಗಳು ಬೆಳಗಿನ ಉಪಹಾರ ತಿರಸ್ಕರಿಸಿ ಇಂದು ಪ್ರತಿಭಟನೆ ಮಾಡಿದರು. ನಮಗೆ ಬೀಡಿ, ಸಿಗರೇಟ್‌, ತಂಬಾಕು ಕೊಡುವವರೆಗೆ ಊಟ, ತಿಂಡಿ ಮಾಡುವುದಿಲ್ಲ ಎಂದು ಹಠ ಹಿಡಿದು ಪ್ರತಿಭಟನೆ ಮಾಡಿರುವ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ದೊರತಿದ್ದು, ವರದಿ ಮಾಡಿದೆ.

ನಟ ದರ್ಶನ್‌ಗೆ ರಾಜಾತಿಥ್ಯ ದೊರಕಿದ ಫೋಟೋ ಹೊರಗೆ ವೈರಲ್‌ ಆಗುತ್ತಿದ್ದಂತೆ ರಾಜ್ಯ ಸರಕಾರ ಎಚ್ಚೆತ್ತಿದೆ. ಪರಪ್ಪನ ಅಗ್ರಹಾರದಲ್ಲಿ ವಿಲ್ಸನ್‌ ಗಾರ್ಡನ್‌ ನಾಗನಿಂದ ರಾಜಾತಿಥ್ಯ ಪಡೆಯುತ್ತಿದ್ದ ದರ್ಶನ್‌ ಇದೀಗ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್‌ ಮಾಡಲಾಗಿದೆ.

You may also like

Leave a Comment