Home » Heart Attack: ಮದುವೆಯ ಹಿಂದಿನ ದಿನವೇ ಯುವಕ ಹೃದಯಾಘಾತದಿಂದ ಸಾವು!!

Heart Attack: ಮದುವೆಯ ಹಿಂದಿನ ದಿನವೇ ಯುವಕ ಹೃದಯಾಘಾತದಿಂದ ಸಾವು!!

5 comments

Heart Attack: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸಾವಿನ ಸೂತಕದ ದುಃಖ ಎದುರಾಗಿದೆ. ಹೌದು, ಮದುವೆಯ ಹಿಂದಿನ ದಿನ ಮದುಮಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡ ಆ‌ರ್.ಸಿ ಗ್ರಾಮದಲ್ಲಿ ನಡೆದಿದೆ.

ಸೆಪ್ಟೆಂಬರ್ 5ರಂದು 31 ವರ್ಷದ ಸದಾಶಿವ ರಾಮಪ್ಪನ ಮದುವೆ ನಿಶ್ಚಯ ಮಾಡಲಾಗಿತ್ತು. ಇಡೀ ಕುಟುಂಬ ಮದುವೆ ಸಂಭ್ರಮ, ಕಾರ್ಯಕ್ರಮ ತಯಾರಿಯಲ್ಲಿ ತೊಡಗಿದ್ದರು. ಆದ್ರೆ ಯುವಕ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತವಾಗಿದ್ದು (Heart Attack) , ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದಾರಿ ಮಧ್ಯದಲ್ಲೇ ಯುವಕ ಉಸಿರು ಚೆಲ್ಲಿದ್ದಾನೆ.

You may also like

Leave a Comment