4
Bellary: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರು ಇಂದು (ಬುಧವಾರ) ಪತ್ನಿ ವಿಜಯಲಕ್ಷ್ಮೀ ಅವರ ಜೊತೆಗೆ ಐದು ನಿಮಿಷ ಮಾತನಾಡಿದ್ದಾರೆ. ಇಂದು ಚಾರ್ಜ್ಶೀಟ್ ಹಾಗೂ ಬೆಂಗಳೂರಿನಲ್ಲಿ ಇವತ್ತು ನಡೆದ ಎಲ್ಲ ಬೆಳವಣಿಗೆ ಕುರಿತು ಮಾಹಿತಿ ಪಡೆದಿದ್ದಾರೆ.
ಪ್ರಿಸನ್ಕಾಲ್ ಸಿಸ್ಟಮ್ನಲ್ಲಿ ಪತ್ನಿಯ ನಂಬರ್ ಸೇವ್ ಮಾಡಲಾಗಿದ್ದು, ಅವರಿಗೆ ಕರೆ ಮಾಡಲಾಗಿದ್ದು. ಐದು ನಿಮಿಷ ಮಾತ್ರ ಕರೆ ಮಾಡುವ ಅವಕಾಶವಿದ್ದು, ಹಾಗಾಗಿ ಇಂದು ನಡೆದ ಬೆಳವಣಿಗೆ ಕುರಿತು ಮಾತನಾಡಿದ್ದಾರೆ.
