Home » Chaddi Gang: ಮತ್ತೆ ಚಡ್ಡಿಗ್ಯಾಂಗ್​ ಅಟ್ಟಹಾಸ: 6 ಅಂಗಡಿಗಳಲ್ಲಿ ಲಕ್ಷ ಲಕ್ಷ ದರೋಡೆ!

Chaddi Gang: ಮತ್ತೆ ಚಡ್ಡಿಗ್ಯಾಂಗ್​ ಅಟ್ಟಹಾಸ: 6 ಅಂಗಡಿಗಳಲ್ಲಿ ಲಕ್ಷ ಲಕ್ಷ ದರೋಡೆ!

5 comments

Chaddi Gang: ಈಗಾಗಲೇ ಚಡ್ಡಿಗ್ಯಾಂಗ್ ಪರಿಣಾಮ ಹಲವು ದರೋಡೆಗಳು ನಡೆದಿದ್ದು, ಇಡೀ ದೇಶವೇ ಬಿಚ್ಚಿ ಬೀಳಿಸುವ ಘಟನೆ ಇದಾಗಿತ್ತು. ಇದೀಗ ನಾಸಿಕ್​ನಲ್ಲಿ ಮತ್ತೆ ಚಡ್ಡಿ ಬಿನಿಯಾನ್​ ಗ್ಯಾಂಗ್​ (Chaddi Gang) ತನ್ನ ಅಟ್ಟಹಾಸ ತೋರಿಸಿದೆ. ಸುಮಾರು 6 ಅಂಗಡಿಗಳಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

ಹೌದು, ಬುಧವಾರ ತಡರಾತ್ರಿ ಮಾಲೆಗಾಂವ್​ನಲ್ಲಿ ಮತ್ತೆ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಮುಖ್ಯವಾಗಿ ಚಡ್ಡಿ, ಬನಿಯಾನ್​ನಲ್ಲಿದ್ದ ಕಳ್ಳರು, ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಹಾರ್ಡ್‌ವೇರ್ ಮತ್ತು ವಿದ್ಯುತ್ ಪಂಪ್‌ಗಳನ್ನು ಮಾರಾಟ ಮಾಡುವ ಆರು ಅಂಗಡಿಗಳಿಗೆ ಕನ್ನ ಹಾಕಿರುವುದು ಕಂಡುಬಂದಿದೆ. ಈ ಗ್ಯಾಂಗ್ ಮಾಲೆಗಾಂವ್‌ನ ಮನೆ ಮತ್ತು ಕಾಲೇಜಿನಿಂದ ಸುಮಾರು 70 ಗ್ರಾಂ ಚಿನ್ನ ಕಳವು ಮಾಡಿತ್ತು.

ಮಾಹಿತಿ ಪ್ರಕಾರ, ಗ್ಯಾಂಗ್‌ನ ಸದಸ್ಯರು ಸಾಮಾನ್ಯವಾಗಿ ಒಳ ಉಡುಪುಗಳನ್ನು ಧರಿಸಿ ಅಪರಾಧಗಳನ್ನು ಮಾಡುತ್ತಾರೆ ಮತ್ತು ಕೆಲವೊಮ್ಮೆ ತೀಕ್ಷ್ಣವಾದ ಆಯುಧಗಳನ್ನು ಹೊಂದಿರುತ್ತಾರೆ. ಇಂತಹ ದರೋಡೆಗಳನ್ನು ಮಾಡುವ ಗುಂಪುಗಳು ಭಯೋತ್ಪಾದಕರ ಸಂಪರ್ಕ ಹೊಂದಿವೆಯೇ ಅಥವಾ ಈ ಚಡ್ಡಿ ಬನಿಯಾನ್​ ಗ್ಯಾಂಗ್ ಹಿಂದಿನ ಉದ್ದೇಶ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

You may also like

Leave a Comment