Viral video: ಪ್ರಪಂಚದಾದ್ಯಂತ ಅನೇಕ ಅಪಾಯಕಾರಿ ಹಾವುಗಳಿವೆ, ಹಾವು ಎಷ್ಟು ವಿಷಕಾರಿ ಎಂದರೆ ವ್ಯಕ್ತಿಯನ್ನು ಕಚ್ಚಿದ ಮರು ಕ್ಷಣವೇ ಅರೆ ತಾಸಿನಲ್ಲೇ ಅತ ಸಾಯುತ್ತಾನೆ. ಅಷ್ಟೇ ಅಲ್ಲ ಕೇವಲ ಒಂದು ಹನಿ ವಿಷದಿಂದ ಮನುಷ್ಯನ ಜೀವ ತೆಗೆಯುವ ಸಾಮರ್ಥ್ಯ ಹಾವಿಗೆ ಇದೆ. ಆದ್ರೆ ಇಲ್ಲೊಂದು ಹಾವು ಇನ್ನೂ ವಿಚಿತ್ರವಾಗಿದೆ.
ಹೌದು, ನೀವು ಎಂದಾದರು ಎರಡು ಕಾಲಿರುವ ಹಾವನ್ನು ನೋಡಿದ್ದೀರಾ, ಹಾಗಿದ್ರೆ ಇಲ್ಲಿದೆ ನೋಡಿ. ಇದು ಹಾವಿನಷ್ಟೆ ಉದ್ದ ಹಾವಿನಷ್ಟೆ ಗಾತ್ರದಲ್ಲಿರುವ ಜೀವಿ ಒಂದು ಇಲ್ಲಿದೆ. ಇದು ನಿಜವಾಗಿಯೂ ಹಾವಾ ಅಥವಾ ಬೇರೆ ಯಾವುದಾದರೂ ಕೀಟವೇ ಎಂಬುದು ಸ್ಪಷ್ಟವಾಗಿಲ್ಲ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ವೈರಲ್( Viral video) ಆಗುತ್ತಿರುವ ಈ ವೀಡಿಯೊವನ್ನು @balichannel ಹೆಸರಿನ Instagram ಕಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಹಾವಿನ ಆಕಾರದಲ್ಲಿರುವ ಇದು ಎರಡು ಕಾಲನ್ನು ಸಹ ಹೊಂದಿದೆ. ಈ ಕೀಟದ ಉದ್ದವು ಹಾವಿನಂತಿದ್ದರೂ, ಬಾಯಿಯನ್ನು ನೋಡಿದರೆ ಅದು ಹಾವಲ್ಲ ಎನ್ನುವಂತಿದೆ. ಇನ್ನೂ ಹಾವಿನಂತಹೆ ಚರ್ಮ ಹಾಗೂ ದೇಹ ವೈಶಿಷ್ಯ ಹೊಂದಿರುವ ಈ ಜೀವಿಯನ್ನು ನೋಡಿ ಯಾವ ಜೀವಿ ಎಂದು ತಿಳಿಯದೆ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಚರ್ಚೆ ನಡೆಯುತ್ತಿದೆ.
