Home » Karnataka Politics: ಕರ್ನಾಟಕದ ಮುಂದಿನ ಸಿಎಂ ನಾನೇ – ಕಾಂಗ್ರೆಸ್ ಪ್ರಬಲ ಶಾಸಕರ ಶಾಕಿಂಗ್ ಸ್ಟೇಟ್ಮೆಂಟ್

Karnataka Politics: ಕರ್ನಾಟಕದ ಮುಂದಿನ ಸಿಎಂ ನಾನೇ – ಕಾಂಗ್ರೆಸ್ ಪ್ರಬಲ ಶಾಸಕರ ಶಾಕಿಂಗ್ ಸ್ಟೇಟ್ಮೆಂಟ್

0 comments

Karnataka Politics: ರಾಜ್ಯದಲ್ಲಿ ಆಗುತ್ತಿರುವ ಸಾಕಷ್ಟು ರಾಜಕೀಯ ಬೆಳವಣಿಗೆಗಳನ್ನು(Karnataka Politics) ನೋಡಿದರೆ ಮುಡಾ ಹಗರಣ ಸಿಎಂ ಸಿದ್ದರಾಮಯ್ಯ(CM Siddaramaiah) ನವರಿಗೆ ಕುಣಿಕೆಯಾಗಿ ಪರಿಣಮಿಸುವುದು, ಅವರು ಮುಂದೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಯಾಕೋ ಪಕ್ಕಾ ಅನಿಸುತ್ತಿದೆ. ಆದರೆ ಯಾವುದನ್ನೂ ನಿಖರವಾಗಿ ಹೇಳಲಾಗದು. ಒಂದು ವೇಳೆ ಹೀಗೇನಾದರೂ ಆಗಿ, ಸಿದ್ದರಾಮಯ್ಯ ಮುಖ್ಯಮಂತ್ರಿ(CM Post) ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಆ ಸ್ಥಾನಕ್ಕೇರುವ ನಾಯಕ ಯಾರು ಎಂಬ ಪ್ರಶ್ನೆ ಎದುರಾಗಿದೆ.

ಹೌದು, ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ತೀವ್ರ ಊಹಾಪೋಹಗಳಿಗೆ ಕಾರಣವಾಗಿದೆ. ಮೂಡಾ ನಿವೇಶನ ಹಂಚಿಕೆ ಅವ್ಯವಹಾರ ಪ್ರಕರಣದ ಆರೋಪದ ಮೇಲೆ ಸಿದ್ದರಾಮಯ್ಯ ಒಂದು ವೇಳೆ ರಾಜೀನಾಮೆ ನೀಡಿದರೆ ಆ ಸ್ಥಾನಕ್ಕೆ ಏರುವ ನಾಯಕ ಯಾರು ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಹಲವಾರು ನಾಯಕರು ಈಗಾಗಲೇ ತುದಿಗಾಲಲ್ಲಿ ನಿಂತಿದ್ದಾರೆ. ಕೆಲವು ನಾಯಕರು ತಾನು ಸಿಎಂ ಸ್ಥಾನದ ಆಕಾಂಕ್ಷಿ ಎನ್ನುವ ಹೇಳಿಕೆಯನ್ನು ಕೂಡಾ ಕೊಟ್ಟಾಗಿದೆ. ಈ ಬೆನ್ನಲ್ಲೇ ಇದೀಗ ಅಚ್ಚರಿ ಎಂಬತೆ ಕಾಂಗ್ರೆಸ್ ಪ್ರಬಲ ಸಚಿವರೊಬ್ಬರು ಮುಂದಿನ ಸಿಎಂ ನಾನೇ ಎಂದು ಹೇಳಿ ಎಲ್ಲರಿಗೂ ಅಚ್ಚರಿ ಉಂಟುಮಾಡಿದ್ದಾರೆ.

ಯಸ್, ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸಚಿವ ಎಂ.ಬಿ ಪಾಟೀಲ್ ಸಹ ಸಿಎಂ ಆಗುವ ಬಯಕೆಯನ್ನು ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ. ಈ ಕುರಿತು ಮಾತನಾಡಿದ ಅವರು ನಾನು ಕೂಡಾ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯನಿದ್ದೇನೆ. ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗ್ತೇನೆ. ಶಿವಾನಂದ ಪಾಟೀಲ್ ಹೇಳಿದಂತೆ ನಾನು ಆಗ್ತೇನೆ. ಆದರೆ ಶಿವಾನಂದ ಪಾಟೀಲರು‌ ಆಗಲ್ಲ, ಅವರು ಜೆಡಿಎಸ್ ನಿಂದ ಬಂದವರು. ಬದಲಾಗಿ ವಿಜಯಪುರದಿಂದ ರಾಜ್ಯದ ಮುಂದಿನ ಸಿಎಂ ಆಗೋದು ನಾನೇ ಎಂದು ಅವರು ಹೇಳಿದ್ದಾರೆ.

 

Karnataka Politics

You may also like

Leave a Comment