Home » China: 104 ದಿನಗಳ ಕಾಲ ರಜೆ ಇಲ್ಲದೆ ಕೆಲಸ ಮಾಡಿದ ಉದ್ಯೋಗಿ; ಕುಸಿದು ಸಾವು

China: 104 ದಿನಗಳ ಕಾಲ ರಜೆ ಇಲ್ಲದೆ ಕೆಲಸ ಮಾಡಿದ ಉದ್ಯೋಗಿ; ಕುಸಿದು ಸಾವು

0 comments
China

China: ಸ್ವಲ್ಪವೂ ಬಿಡುವಿಲ್ಲದೆ ಕೆಲಸ ಮಾಡಿ ವ್ಯಕ್ತಿಯೋರ್ವ ನಿರಂತರವಾಗಿ 104 ದಿನಗಳ ಕಾಲ ಕೆಲಸ ಮಾಡಿದ್ದು, ಅಂಗಾಗ ವೈಫಲ್ಯದಿಂದ ನಂತರ ಸಾವಿಗೀಡಾದ ಘಟನೆಯೊಂದು ಚೀನಾದಲ್ಲಿ ನಡೆದಿದೆ.

ಚೀನಾದ ಕಂಪನಿಯು ವ್ಯಕ್ತಿಯನ್ನು ಓವರ್‌ಟೈಮ್‌ ನೆಪದಲ್ಲಿ ಗಂಟೆಗಟ್ಟಲೆ ದುಡಿಯುವ ಹಾಗೆ ಮಾಡಿದ್ದು, ಇದಕ್ಕೆ ಕಾರಣ ಎನ್ನಲಾಗಿದೆ. 104 ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿ, ದಿನಕ್ಕೆ 8 ಗಂಟೆಗಳ ಕಾಲ ಓವರ್‌ಟೈಮ್‌ ಕೂಡಾ ಮಾಡಿದ್ದು, ಆರೋಗ್ಯ ಹಾಳಾಗೋಕೆ ಕಾರಣ ಎನ್ನಲಾಗಿದೆ.

ಎಪ್ರಿಲ್‌ 6 ರಂದು ರಜೆ ತೆಗುದುಕೊಂಡಿದ್ದು, ಮೇ.25 ರಂದು ಆರೋಗ್ಯ ಹದಗೆಟ್ಟಿದ್ದು, ಮೂರು ದಿನಗಳ ಕಾಲ ಅವರ ಸ್ಥಿತಿ ಗಂಭೀರವಾಗಿದ್ದು, ನಂತರ ಶಾಸ್ವಕೋಶದ ಸೋಂಕು, ಉಸಿರಾಟದ ತೊಂದರೆ ಉಂಟಾಗಿ ಕೊನೆಗೆ ಜೂ.1 ರಂದು ನಿಧನರಾಗಿದ್ದಾರೆ.
ಸತತವಾಗಿ ನಲವತ್ತೆಂಟು ಗಂಟೆಗಳ ಡ್ಯೂಟಿ ಮಾಡಿ ಇದ್ದಕ್ಕಿದ್ದಂತೆ ಫ್ಯಾಕ್ಟರಿಯಲ್ಲಿ ಕುಸಿದು ಬಿದ್ದಿದ್ದ ಇವರನ್ನು ಸಹೋದ್ಯೋಗಿಗಳು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅತಿಯಾದ ದೈಹಿಕ ಶ್ರಮದಿಂದಾಗಿ ದೇಹದಲ್ಲಿನ ಅಂಗಗಳು ವಿಫಲಗೊಂಡಿದ್ದು, ಸಾವಿಗೀಡಾಗಿದ್ದಾರೆ.

ನಂತರ ಉದ್ಯೋಗಿಯ ಕುಟುಂಬ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ನ್ಯಾಯಾಲಯದಲ್ಲಿ ಕಂಪನಿಯು ಒಂದು ರೂಪಾಯಿ ಕೂಡಾ ನೀಡುವುದಿಲ್ಲ ಎಂದು ವಾದ ಮಾಡಿತ್ತು. ನಾವು ಹೆಚ್ಚಿನ ಸಮಯ ಕೆಲಸ ಮಾಡಲು ಕೇಳಲಿಲ್ಲ ಎಂದು ದೂರಿದೆ. ಉದ್ಯೋಗಿ ಪರ ವಕೀಲರು ಈತ ಸಾವನ್ನಪ್ಪಲು ಒತ್ತಡವೇ ಕಾರಣ ಎಂದು ಹೇಳಲಾಗಿದ್ದು, ನಂತರ ಚೀನಾದ ನ್ಯಾಯಾಲಯವು ಕಂಪನಿಯು ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆ ಮಾಡಿದೆ ಎಂದು ಹೇಳಿದೆ. 56 ಸಾವಿರ ಡಾಲರ್‌ ಪರಿಹಾರ ನೀಡಲು ಆದೇಶಿಸಿದೆ. ಚೀನಾದ ಯುವಾನ್‌ ನಲ್ಲಿ ನಾಲ್ಕು ಲಕ್ಷ. ಇದು ಅತ್ಯಂತ ಕಡಿಮೆ ಮೊತ್ತದ ಪರಿಹಾರವಾಗಿದೆ ಎಂದು ಹೇಳಲಾಗಿದೆ.

You may also like

Leave a Comment