Home » Bangalore: 65ಗ್ರಾಂ ಚಿನ್ನದ ಸರ ಸಮೇತ ರಾತ್ರಿ ಗಣೇಶ ವಿಸರ್ಜನೆ; ತಡವಾಗಿ ನೆನಪಿಗೆ ಬಂದು ಹುಡುಕಾಟ, ಮುಂಜಾನೆ ಪತ್ತೆ

Bangalore: 65ಗ್ರಾಂ ಚಿನ್ನದ ಸರ ಸಮೇತ ರಾತ್ರಿ ಗಣೇಶ ವಿಸರ್ಜನೆ; ತಡವಾಗಿ ನೆನಪಿಗೆ ಬಂದು ಹುಡುಕಾಟ, ಮುಂಜಾನೆ ಪತ್ತೆ

0 comments
Bangalore

Bangalore: ಪೂಜೆಗೆಂದು ಗಣೇಶನ ಮೂರ್ತಿಗೆ ಹಾಕಿದ 65 ಗ್ರಾಂ ಚಿನ್ನದ ಸರ ಸಮೇತ ಶನಿವಾರ ಸಂಜೆ ವಿಸರ್ಜನೆ ಮಾಡಿದ ಯುವಕರ ಗುಂಪೊಂದು ಅನಂತರ ನೆನಪಾಗಿ ರಾತ್ರಿ ಪೂರ್ತಿ ಹುಡುಕಾಟ ನಡೆಸಿದ ಘಟನೆಯೊಂದು ಬೆಂಗಳೂರು ಮಾಗಡಿ ರಸ್ತೆ ದಾಸರಹಳ್ಳಿ ಸಮೀಪದ ಬಿ.ಆರ್‌.ಐ. ಕಾಲೋನಿಯಲ್ಲಿ ನಡೆದಿದೆ.

ಯುವಕರ ಗುಂಪೊಂದು 65 ಗ್ರಾಂ ಚಿನ್ನದ ಸರ ಹಾಕಿ, ಶನಿವಾರ ಸಂಜೆ ವಿಸರ್ಜನೆ ಮಾಡಿದ್ದಾರೆ. ಶನಿವಾರ 7 ಸಂಜೆ ಹೋಗಿ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದರು. ಆದರೆ ರಾತ್ರಿ 10 ಗಂಟೆ ವೇಳೆಗೆ ಯುವಕರಿಗೆ ಇದು ನೆನಪಾಗಿ ದಿಢೀರ್‌ ಚಿನ್ನದ ಸರ ನೆನಪಾಗಿದ್ದು, ಓಡೋಡಿ ಬಂದಿದ್ದು, ಟ್ರಕ್‌ನ ಚಾಲಕ, ಬಿಬಿಎಂಪಿ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ.

ಕೂಡಲೇ ಟ್ರಕ್‌ನಲ್ಲಿದ್ದ ನೀರನ್ನು ಖಾಲಿ ಮಾಡಿ, ಗಣೇಶ ಮೂರ್ತಿ ಕರಗಿದ್ದ ಮಣ್ಣಲ್ಲಿ ಚಿನ್ನದ ಸರಕ್ಕೆ ಹುಡುಕಾಟ ಮಾಡಿದ್ದು, ರಾತ್ರಿಯೆಲ್ಲಾ ಹುಡುಕಾಡಿದ ಬಳಿಕ ಬೆಳಗಿನ ಜಾವ 65 ಗ್ರಾಂ ಚಿನ್ನದ ಸರ ದೊರಕಿದೆ.

You may also like

Leave a Comment