GST on Cancer: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಎಸ್‌ಟಿ ಕೌನ್ಸಿಲ್‌ನ 54 ನೇ ಸಭೆಯಲ್ಲಿ ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್ಟಿಯನ್ನು ಕಡಿಮೆ ಮಾಡಲು ಜಿಎಸ್ಟಿ ಕೌನ್ಸಿಲ್ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈಗ ಕ್ಯಾನ್ಸರ್ ಔಷಧಿಗಳ ಮೇಲೆ ಶೇಕಡಾ 12 ರ ಬದಲಾಗಿ ಶೇಕಡಾ 5 ರಷ್ಟು ಜಿಎಸ್ಟಿ ವಿಧಿಸಲಾಗುವುದು.
ಆರೋಗ್ಯ ಮತ್ತು ಜೀವ ವಿಮೆಯ ಪ್ರೀಮಿಯಂ ಪಾವತಿಯ ಮೇಲೆ ವಿಧಿಸಬೇಕಾದ ಜಿಎಸ್‌ಟಿ ಬಗ್ಗೆ ಜಿಎಸ್‌ಟಿ ಕೌನ್ಸಿಲ್ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಧಾರ್ಮಿಕ ಪ್ರವಾಸಗಳಿಗೆ ಹೆಲಿಕಾಪ್ಟರ್ ಸೇವೆಯನ್ನು ಬಳಸುವಾಗ, ಈಗ 18 ಪ್ರತಿಶತದ ಬದಲಿಗೆ ಕೇವಲ 5 ಪ್ರತಿಶತದಷ್ಟು GST ಪಾವತಿಸಬೇಕಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಗಳ ಹಣಕಾಸು ಸಚಿವರೊಂದಿಗೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆರೋಗ್ಯ ವಿಮೆ ಮತ್ತು ಜೀವ ವಿಮೆಯ ಪ್ರೀಮಿಯಂ ಪಾವತಿಯ ಮೇಲಿನ ಜಿಎಸ್ಟಿಯನ್ನು ಕಡಿಮೆ ಮಾಡುವ ಕುರಿತು ಚರ್ಚೆ ನಡೆದಿದೆ.
ಸೋಮವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಧಾರ್ಮಿಕ ಯಾತ್ರೆ ಕೈಗೊಳ್ಳುವವರಿಗೂ ಪರಿಹಾರ ನೀಡಲಾಗಿದೆ. ಧಾರ್ಮಿಕ ಯಾತ್ರೆಗೆ ಹೆಲಿಕಾಪ್ಟರ್ ಸೇವೆಗಳನ್ನು ಬಳಸುವಾಗ, ಈಗ 18 ಪ್ರತಿಶತದ ಬದಲಿಗೆ ಕೇವಲ 5 ಪ್ರತಿಶತದಷ್ಟು GST ಪಾವತಿಸಬೇಕಾಗುತ್ತದೆ. ಉತ್ತರಾಖಂಡದ ಹಣಕಾಸು ಸಚಿವ ಪ್ರೇಮಚಂದ್ ಅಗರ್ವಾಲ್ ಎಎನ್ಐಗೆ ಈ ಮಾಹಿತಿ ನೀಡಿದ್ದಾರೆ. ಜಿಎಸ್‌ಟಿ ಕೌನ್ಸಿಲ್ ನಮ್ಮ ಬೇಡಿಕೆಯನ್ನು ಒಪ್ಪಿಕೊಂಡಿದೆ ಎಂದು ಹೇಳಿದರು.
ಆದಾಗ್ಯೂ, ಈ ಸೌಲಭ್ಯವು ಹೆಲಿಕಾಪ್ಟರ್ ಸೇವೆಯನ್ನು ಹಂಚಿಕೊಳ್ಳುವವರಿಗೆ ಮಾತ್ರ ಲಭ್ಯವಿರುತ್ತದೆ. ಚಾರ್ಟರ್ಡ್ ಹೆಲಿಕಾಪ್ಟರ್ ಸೇವೆಯನ್ನು ಪಡೆಯುವಲ್ಲಿ, ಕೇವಲ 18 ಪ್ರತಿಶತ ಜಿಎಸ್‌ಟಿ ಪಾವತಿಸಬೇಕಾಗುತ್ತದೆ.
