Home » Rahul Gandhi : ಕಾಂಗ್ರೆಸ್ ನ ಈ ಯುವ ಸಂಸದೆಯೊಂದಿಗೆ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ರಾಹುಲ್ ಗಾಂಧಿ ಮದುವೆ?

Rahul Gandhi : ಕಾಂಗ್ರೆಸ್ ನ ಈ ಯುವ ಸಂಸದೆಯೊಂದಿಗೆ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ರಾಹುಲ್ ಗಾಂಧಿ ಮದುವೆ?

0 comments
Rahul Gandhi

Rahul Gandhi: ದೇಶದಲ್ಲಿ ಕೆಲವೊಂದು ವಿಚಾರಗಳು ಕೊನೆಯೇ ಇಲ್ಲದಂತೆ ಆಗಾಗ ಚರ್ಚೆಗೆಬರುತ್ತವೆ. ಅದರಲ್ಲಿ ಕಾಂಗ್ರೆಸ್ ಯುವ ನಾಯಕ, ಮೋಸ್ಟ್ ಬ್ಯಾಚುಲರ್ ರಾಹುಲ್ ಗಾಂಧಿ ಅವರ ಮದುವೆ ವಿಚಾರ ಕೂಡ ಒಂದು. ಅಂತೆಯೇ ಇದೀಗ ಮತ್ತೆ ಈ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ರಾಹುಲ್ ಗಾಂಧಿ ಮದುವೆಯಾಗುತ್ತಾರೆ ಎನ್ನಲಾದ ಹುಡುಗಿಯ ಹೆಸರು ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.


ಹೌದು, ಸದಾ ರಾಜಕೀಯದಲ್ಲಿ ಬ್ಯುಸಿಯಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi Marriage) ಮದುವೆಯಾಗದೇ ಉಳಿದಿರುವ ಬಗ್ಗೆ ಆಗಾಗ ಚರ್ಚೆಗೆ ಬರುತ್ತಲೇ ಇರುತ್ತವೆ. ಸ್ಟಿಲ್‌ ಎಲಿಜಿಬಲ್‌ ಬ್ಯಾಚುಲರ್‌ ಆಗಿರುವ ರಾಹುಲ್‌ ಜತೆ ಆಗಾಗ ಬೇರೆ ಬೇರೆ ತರುಣಿಯರ ಹೆಸರು ತಳುಕು ಹಾಕಿಕೊಳ್ಳುತ್ತಿರುತ್ತವೆ. ಕೊನೆಗೆ ಅವುಗಳು ವದಂತಿಗಳಾಗಿಯೇ ಉಳಿದು ಬಿಡುತ್ತದೆ. ಇದೀಗ ರಾಹುಲ್‌ ಗಾಂಧಿ ವಿವಾಹದ ಚರ್ಚೆ ಮತ್ತೆ ಭುಗಿಲೆದ್ದಿದ್ದು, ಕಾಂಗ್ರೆಸ್ ನ ಯುವ ಸಂಸದೆ ಪ್ರಣಿತಿ ಶಿಂಧೆ(Pranithi Shinde) ಜೊತೆ ರಾಹುಲ್ ಗಾಂಧಿ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ರಾಹುಲ್​ ಗಾಂಧಿ ತಮ್ಮ ಪಕ್ಷದ ಸಂಸದೆ, ಮಹಾರಾಷ್ಟ್ರ ಮೂಲದ ಪ್ರಣಿತಿ ಶಿಂಧೆ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ಇವರಿಬ್ಬರು ಜತೆಯಾಗಿ ತೆಗೆಸಿಕೊಂಡಿರುವ ಫೋಟೋ ಈ ಊಹಾಪೋಹಗಳನ್ನು ಹುಟ್ಟು ಹಾಕಿದೆ. ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿ ಒಂದರಲ್ಲಿ ಲಾಲು ಪ್ರಸಾದ್​ ಯಾದವ್​ ಕೂಡ ರಾಹುಲ್​ ಮದುವೆ ಬಗ್ಗೆ ಮಾತನಾಡುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿರುವ ವದಂತಿಗಳ ನಡುವೆಯೇ ರಾಹುಲ್ ಗಾಂಧಿ ಅಥವಾ ಪ್ರಣಿತಿ ಶಿಂಧೆ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಯಾರು ಈ ಪ್ರಮಿತಾ ಶಿಂಧೆ?
ಪ್ರಣಿತಿ ಶಿಂಧೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ. 43 ವರ್ಷದ ಪ್ರಣಿತಿ ಶಿಂಧೆ ಸೊಲ್ಲಾಪುರ ಸಿಟಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ, ಪ್ರಣಿತಿ ಅವರು ಸೋಲಾಪುರದಿಂದ ಎಂಪಿ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿದರು ಮತ್ತು ಬಿಜೆಪಿ ಅಭ್ಯರ್ಥಿ ರಾಮ್ ವಿಠ್ಠಲ್ ಸತ್ಪುಟೆ ಅವರನ್ನು ಸೋಲಿಸಿದರು. ಪ್ರಣಿತಿ ಶಿಂಧೆ ಅವರ ಈ ಗೆಲುವು ವಿಶೇಷವಾಗಿತ್ತು ಏಕೆಂದರೆ ಅವರು ಸೊಲ್ಲಾಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಮಹಿಳಾ ಸಂಸದರಾಗಿದ್ದಾರೆ.

https://twitter.com/_iamronnie_/status/1832993625371721975

 

You may also like

Leave a Comment