Home » Ramayana: ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್! ಹೊಸ ಅವತಾರದಲ್ಲಿ ಕಾಣಲಿದ್ದಾರೆ ರಾಕಿಂಗ್ ಸ್ಟಾರ್!

Ramayana: ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್! ಹೊಸ ಅವತಾರದಲ್ಲಿ ಕಾಣಲಿದ್ದಾರೆ ರಾಕಿಂಗ್ ಸ್ಟಾರ್!

0 comments

Ramayana: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಯಶ್ ಅವರನ್ನು ಹೊಸ ಪಾತ್ರದಲ್ಲಿ ನೋಡುವ ಕಾತುರ ಇದ್ದೇ ಇರುತ್ತೆ. ಅಂತೆಯೇ ಇದೀಗ ಯಶ್ ಅವರು ನೀವು ಊಹೆ ಕೂಡಾ ಮಾಡದಿರುವ ಪಾತ್ರ ಮಾಡುತ್ತಿದ್ದಾರೆ.

ಹೌದು, ಯಶ್ ಒಪ್ಪಿಕೊಂಡಿರುವ ‘ರಾಮಾಯಣ’ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಡಿಸೆಂಬರ್‌ನಲ್ಲಿ ಯಶ್ (Yash) ‘ರಾಮಾಯಣ’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ‘ರಾಮಾಯಣ’ (Ramayana) ಚಿತ್ರದಲ್ಲಿ ಯಶ್ ‘ರಾವಣ’ನಾಗಿ ಬಣ್ಣ ಹಚ್ಚಲಿದ್ದಾರೆ. ಜೊತೆಗೆ ‘ಟಾಕ್ಸಿಕ್’ ಸಿನಿಮಾ ಜೊತೆಗೆಯೇ ಈ ಚಿತ್ರಕ್ಕೂ ಅವರು ಸಾಥ್ ನೀಡಲಿದ್ದಾರೆ.

ಮುಖ್ಯವಾಗಿ ರಣ್‌ಬೀರ್ ರಾಮನ ಪಾತ್ರ, ಸಾಯಿ ಪಲ್ಲವಿ (Sai Pallavi) ಸೀತೆ ಪಾತ್ರಕ್ಕೆ ರೆಡಿ ಆಗಿದ್ದಾರೆ. ಡಿಸೆಂಬರ್‌ನಲ್ಲಿ ಚಿತ್ರದ ಸೆಟ್‌ಗೆ ಯಶ್ ಎಂಟ್ರಿ ಕೊಡಲಿದ್ದಾರೆ. ಇನ್ನು ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

ವಿಶೇಷ ಅಂದ್ರೆ ‘ರಾಮಾಯಣ’ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಸಹ ನಿರ್ಮಾಪಕನಾಗಿಯೂ ಕನ್ನಡದ ನಟ ಯಶ್ ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ರಾಮಾಯಣ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಖಜಾನೆ ತುಂಬಿಸುವುದು ಗ್ಯಾರಂಟಿ ಅನಿಸುತ್ತಿದೆ.

You may also like

Leave a Comment