Home » Darshan: ಪವಿತ್ರ ಗೌಡ ಬೆಡ್ ರೂಮಿನಲ್ಲಿ ದರ್ಶನ್ ಒಳ ಉಡುಪು ಪತ್ತೆ !!

Darshan: ಪವಿತ್ರ ಗೌಡ ಬೆಡ್ ರೂಮಿನಲ್ಲಿ ದರ್ಶನ್ ಒಳ ಉಡುಪು ಪತ್ತೆ !!

0 comments

Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ವಿಚಾರವಾಗಿ ದರ್ಶನ್(Darshan) ಹಾಗೂ ಗ್ಯಾಂಗ್ ವಿರುದ್ಧ ಪೋಲಿಸರು ಕೋರ್ಟ್ ಗೆ 4 ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಭಯಾನಕ ವಿಚಾರಗಳು ಹೊರಬೀಳುತ್ತಿವೆ. ಅಂತೆಯೇ ದರ್ಶನ್ ಹಾಗೂ ಪವಿತ್ರ(Pavitra Gouda) ಲಿವಿನ್ ರಿಲೇಶನ್ ಶಿಪ್ ನಲ್ಲಿ ಇದ್ದರು ಎಂಬುದೂ ಬಯಲಾಗಿದೆ. ಇದರ ಜಾಡು ಹಿಡಿದು ಹೋದ ಪೋಲಿಸರಿಗೆ ಕೆಲವು ಸಾಕ್ಷಿಗಳು ದೊರಕಿವೆ.

ಹೌದು, ಪವಿತ್ರಾ ಗೌಡ ಮತ್ತು ದರ್ಶನ್ ನಡುವೆ ಲಿವ್ ಇನ್ ರಿಲೇಷನ್ ಶಿಪ್ ಇತ್ತು ಎನ್ನುವುದನ್ನು ಇಬ್ಬರೂ ಚಾರ್ಜ್ ಶೀಟ್ ನಲ್ಲೇ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆಗಾಗಿ ಆರ್ ಆರ್ ನಗರದ ಪವಿತ್ರಾ ಮನೆಯಲ್ಲಿರುವ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಪವಿತ್ರಾ ಬೆಡ್ ರೂಂನಲ್ಲಿ ದರ್ಶನ್ ಒಳ ಉಡಪು, ಕೂದಲು ಮಾದರಿಗಳು ಪತ್ತೆಯಾಗಿದೆ.

ಪತ್ತೆಯಾದ ಈ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ದರ್ಶನ್ ಮತ್ತು ಪವಿತ್ರಾ ನಡುವೆ ಎಂಥಾ ಸಂಬಂಧವಿತ್ತು ಎಂಬುದನ್ನು ಸಾಕ್ಷ್ಯ ವನ್ನು ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ ಪವಿತ್ರಾ ಮನೆಯಲ್ಲಿ ದರ್ಶನ್ ರ ಸಿನಿಮಾಗಳ ನೆನಪಿನ ಕಾಣಿಕೆಗಳನ್ನೂ ಇಡಲಾಗಿದೆ. ಹೀಗಾಗಿ ಇಬ್ಬರ ನಡುವೆ ಎಷ್ಟು ಆತ್ಮೀಯ ಸಂಬಂಧವಿತ್ತು ಎಂಬುದು ಇದರಿಂದ ಖಚಿತವಾಗುತ್ತದೆ.

You may also like

Leave a Comment