Home » Tirupati : ದನದಕೊಬ್ಬು, ಮೀನೆಣ್ಣೆ ಬಳಸಿ ತಿರುಪತಿ ಲಾಡು ತಯಾರು-ಪರೀಕ್ಷಾ ವರದಿ ಬಹಿರಂಗ

Tirupati : ದನದಕೊಬ್ಬು, ಮೀನೆಣ್ಣೆ ಬಳಸಿ ತಿರುಪತಿ ಲಾಡು ತಯಾರು-ಪರೀಕ್ಷಾ ವರದಿ ಬಹಿರಂಗ

0 comments

Tirupati: ತಿರುಪತಿಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆಂದು ನೀಡುವ ಪ್ರಸಾದ ರೂಪದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಮತ್ತು ತಾಳೆ ಎಣ್ಣೆ ಬಳಸಲಾಗುತ್ತಿತ್ತು ಎನ್ನುವುದು ದೃಢಪಟ್ಟಿದೆ. ಲ್ಯಾಬ್‌ ರಿಪೋರ್ಟ್‌ನಲ್ಲಿ ಈ ಅಂಶ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

ಹಾಗೂ ಈ ಕುರಿತ ದಾಖಲೆ ಕೂಡಾ ಬಿಡುಗಡೆ ಮಾಡಲಾಗಿದೆ. ವೈಎಸ್‌ಆರ್‌ಸಿಪಿ ಸರಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ದು ಆರೋಪ ಮಾಡಿದ್ದು, ಇದರ ನಡುವೆಯೇ ಈ ಆಘಾತಕಾರಿ ಟೆಸ್ಟ್‌ ರಿಪೋರ್ಟ್‌ ಹೊರಬಿದ್ದಿದೆ.

ಆದರೆ ಜಗನ್‌ಮೋಹನ್‌ ರೆಡ್ಡಿ ವೈಎಸ್‌ಆರ್‌ಸಿ ಪಕ್ಷ ಈ ಆರೋಪವನ್ನು ನಿರಾಕರಣೆ ಮಾಡಿದೆ.

KMF ಸ್ಪಷ್ಟನೆ;

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ಕುರಿತು ನಡೆಯುತ್ತಿರುವ ವಿವಾದದ ನಡುವೆ, ಕರ್ನಾಟಕ ಹಾಲು ಒಕ್ಕೂಟವು ಗುರುವಾರ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಮಂಡಳಿಯು ಕಳೆದ ನಾಲ್ಕು ವರ್ಷಗಳಿಂದ ತಮ್ಮಿಂದ ತುಪ್ಪವನ್ನು ಖರೀದಿಸಿಲ್ಲ ಎಂದು ಹೇಳಿದೆ.

ಆದರೆ, ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ತಾನು ನಂದಿನಿ ತುಪ್ಪವನ್ನು ಪೂರೈಸಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

You may also like

Leave a Comment