BJP MLA Munirathna: ಬೆಂಗಳೂರು, ಸೆಪ್ಟೆಂಬರ್ 20: ಜಾತಿ ನಿಂದನೆ ಆರೋಪದಡಿ ಜೈಲು ಸೇರಿದ್ದ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣವು ದಾಖಲಾಗಿ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೆ, ಇದೀಗ ಮತ್ತೊಂದು ಸ್ಫೋಟಕ ಸುದ್ದಿ ಹೊರಬೀಳುತ್ತಿದೆ. ಮುನಿರತ್ನ ತನ್ನ ರಾಜಕೀಯ ವಿರೋಧಿಗಳನ್ನ ಮಟ್ಟ ಹಾಕಲು ಹೊಸ ಷಡ್ಯಂತ್ರವನ್ನ ರೂಪಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಅವರು ತನ್ನ ರಾಜಕೀಯ ಎದುರಾಳಿಗಳನ್ನು ಸದೆ ಬಡಿಯಲು HIV ಮಿಶ್ರಿತ ಹನಿಟ್ರ್ಯಾಪ್ ನಡೆಸಲೂ ಹೊರಟಿದ್ದರು ಎಂಬ ಸ್ಟೋಟಕ ಮಾಹಿತಿ ಈಗ ಹೊರಬಂದಿದೆ. ಘಟನೆಯ ವಿವರಗಳು ಕೇಳಿ ರಾಜಕೀಯ ನಾಯಕರುಗಳು ಬೆಚ್ಚಿ ಬಿದ್ದಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನರವರು ತನ್ನ ರಾಜಕೀಯ ವೈರಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಮಾಜಿ ಸಂಸದ ಡಿ ಕೆ ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪನ್ನ ಬಗ್ಗು ಬಡಿಯಲು ಹೊಸ ಷಡ್ಯಂತ್ರ ರೂಪಿಸಿದ್ದರು ಎಂಬ ಮಾಹಿತಿ ಹೊರಬರುತ್ತಿದೆ. ತನ್ನ ವೈರಿಗಳಾದ ಮಾಜಿ ಸಂಸದ ಡಿ ಕೆ ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪರಿಗೆ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಮುನಿರತ್ನ ತಂತ್ರಗಾರಿಕೆ ಮಾಡಿದ್ದರು ಎನ್ನುವ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಈ ದುಷ್ಕೃತ್ಯಕ್ಕಾಗಿ ಅವರು ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಮೂವರ ತಂಡವನ್ನು ನೇಮಿಸಿದ್ದರು. ಈ ಷಡ್ಯಂತ್ರ ಕೇವಲ ಕಾಂಗ್ರೆಸ್ ಪಕ್ಷದ ಎದುರಾಳಿಗಳಿಗೆ ಮಾತ್ರವಲ್ಲದೆ ತನ್ನದೇ ಪಕ್ಷದ, ಬಿಜೆಪಿಯ ಒಕ್ಕಲಿಗ ಸಮುದಾಯದ ಹಿರಿಯ ನಾಯಕರಿಗೆ ಕೂಡಾ ಮುನಿರತ್ನ ಏಡ್ಸ್ ರೋಗಿಯ ರಕ್ತ ಚುಚ್ಚಲು ಮಾಡಲು ಪ್ಲಾನ್ ಹಾಕಿಕೊಂಡಿದ್ದರು ಎಂದು ಖಾಸಗಿ ಸುದ್ದಿಸಂಸ್ಥೆ ಸ್ಫೋಟಕ ವರದಿ ಮಾಡಿದೆ.
ತನ್ನದೇ ಬಿಜೆಪಿ ಪಕ್ಷದ ಒಕ್ಕಲಿಗ ಹಿರಿಯ ನಾಯಕ ಹಾಗೂ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ರಿಗೆ HIV injection ಚುಚ್ಚಲು ತಂತ್ರ.ನಡೆಸಲಾಗಿತ್ತು. ಅವರಿಗೆ ಹೂ ಗುಚ್ಛ ನೀಡುವ ನೆಪ ಹೇಳಿ, ಆ ಸಂದರ್ಭ ಏಡ್ಸ್ ಸೋಕಿತ ರಕ್ತ ಇಂಜೆಕ್ಟ್ ಮಾಡಲು ಮುನಿರತ್ನ ಅವರು ಪ್ಲ್ಯಾನ್ ಹಾಕಿಕೊಂಡಿದ್ದರು. ಏಡ್ಸ್ ರಕ್ತ ಇಂಜೆಕ್ಟ್ ಮಾಡುವ ಕೆಲಸಕ್ಕಾಗಿ ತನ್ನ ಅಭಿಮಾನಿಯನ್ನೇ ಮುನಿರತ್ನ ಅವರು ನಿಯೋಜಿಸಿದ್ದರು ಎಂದು ಹೇಳಲಾಗಿದೆ. ಇದಕ್ಕಾಗಿ ಕೈಗೆ ಗ್ಲೌಸ್ ಹಾಕಿಕೊಂಡು ಅದರೊಳಗೆ ವಿಶೇಷ ಬ್ಲೇಡ್ ಅಳವಡಿಸಲಾಗಿತ್ತಂತೆ. ಆ ಗ್ಲೌಸ್ ನಲ್ಲಿ HIV ಸೋಂಕಿತೆಯ ರಕ್ತದ ಟ್ಯೂಬ್ ಅಡಗಿಸಿ ಇಡಲಾಗಿತ್ತು ಎಂದು ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮುನಿರತ್ನ ಅಭಿಮಾನಿ ಸ್ಟೋಟಕ ಹೇಳಿ ನೀಡಿದ್ದಾಗಿ ವರದಿಯಾಗಿದೆ.
