Home » Anitha Kumaraswamy: ಅನಿತಾ ನಿಮ್ಮ ಪತ್ನಿ ಹೌದಾ ಅಲ್ಲವಾ, ಕೃಷ್ಣ ಭೈರೇಗೌಡ ಕುಮಾರಸ್ವಾಮಿಗೆ ಪ್ರಶ್ನೆ !

Anitha Kumaraswamy: ಅನಿತಾ ನಿಮ್ಮ ಪತ್ನಿ ಹೌದಾ ಅಲ್ಲವಾ, ಕೃಷ್ಣ ಭೈರೇಗೌಡ ಕುಮಾರಸ್ವಾಮಿಗೆ ಪ್ರಶ್ನೆ !

0 comments

Anitha Kumaraswamy: ಬೆಂಗಳೂರು: ‘ಅನಿತಾ ಕುಮಾರಸ್ವಾಮಿ ನಿಮ್ಮ ಧರ್ಮಪತ್ನಿ ಹೌದಾ,ಅಲ್ಲವಾ? ವಿಮಲಾ ನಿಮ್ಮ ಅತ್ತೆ ಹೌದಾ ಅಲ್ಲವಾ? ನೀವು ಫೈಲ್ ಪುಟ್ ಅಪ್ ಮಾಡಿಸಿದ್ದು ನಿಜವಾ ಸುಳ್ಳಾ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರಶ್ನಿಸಿದರು. ಈ ಸಂಬಂಧ ಕೃಷ್ಣಬೈರೇಗೌಡರವರು ಸತ್ಯವಂತರಾಗಿ ಇದ್ದುಕೊಂಡು ಚುನಾವಣಾ ರಾಜಕೀಯ ಮಾಡಲು ಆಗಲ್ಲ ಅನ್ನುವ ಸತ್ಯ ಹೇಳಿದ್ದಾರೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಗಂಗೇನಹಳ್ಳಿ ಜಮೀನಿನ (ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ) ಡಿನೋಟಿಫೈ ಮಾಡಲು ಅತ್ಯುತ್ಸಾಹ ತೋರಿದ್ದು ಏಕೆ ? ಎಂದು ಅವರು ಕೇಳಿದ್ದಾರೆ.ಕುಮಾರಸ್ವಾಮಿ ಅತ್ತೆ ಈ ಭೂಮಿಯನ್ನು ತಮ್ಮ ಹೆಸರಿಗೆ ಜಿಪಿಎ ಮಾಡಿಸಿಕೊಂಡಿದ್ದು ಸುಳ್ಳೇ? ಅನಿತಾ ಕುಮಾರಸ್ವಾಮಿ ಅವರ ಸಹೋದರನ ಹೆಸರಿಗೆ ಈ ಜಮೀನು ನೋಂದಣಿಯಾಗಿಲ್ಲವೇ, ಇದು ಅಧಿಕಾರದ ದುರ್ಬಳಕೆಯಲ್ಲವೇ? ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅದೇ ಜಮೀನನ್ನು ಸತ್ತವರ ಹೆಸರಿಗೆ ಡಿನೋಟಿಫೈ ಮಾಡಲಾಗಿತ್ತು. ಕೊನೆಗೆ ಈಗ ಈ ಜಮೀನು ಕುಮಾರಸ್ವಾಮಿ ಅವರ ಬಾಮೈದನ ಹೆಸರಿಗೆ ನೋಂದಣಿ ಆಗಿದೆ. ಇದರಿಂದ ಯಾರಿಗೆ ಲಾಭವಾಯಿತು ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಲಿ ಸಾಕು’ ಎಂದು ಅವರು ಹೇಳಿದರು.

‘ಕುಮಾರಸ್ವಾಮಿಯವರಂತೆ ವೈಯಕ್ತಿಕ ದಾಳಿ ನಡೆಸುವುದು, ನಿಂದಿಸುವುದು ನಮ್ಮ ಸಂಸ್ಕೃತಿಯಲ್ಲ. ಯಾರು ಯಾರನ್ನೇ ನಿಂದಿಸಿದರೂ ಸತ್ಯ ಏನು ಎಂಬುದು ಜನರಿಗೆ ತಿಳಿದಿದೆ. ವೈಯಕ್ತಿಕ ನಿಂದನೆ ಮತ್ತು ದಾಳಿಗಳಿಗೆ ನಾನು ಬಗ್ಗುವುದಿಲ್ಲ’ ಎಂದು ಕೃಷ್ಣಬೈರೇಗೌಡ ಹೇಳಿದರು.

‘ಇವರು ಸತ್ಯ ಹರಿಶ್ಚಂದ್ರರಾ? ಎಂದು ನನ್ನನ್ನು ಉದ್ದೇಶಿಸಿ ಕೇಳಿದ್ದಾರೆ. ಚುನಾವಣಾ ರಾಜಕೀಯದಲ್ಲಿ ಇರುವವರು ಹರಿಶ್ಚಂದ್ರರಾಗಿರಲು ಸಾಧ್ಯವಿಲ್ಲ. ನಾನು ಸತ್ಯಹರಿಶ್ಚಂದ್ರ ಎಂದು ಹೇಳಿಕೊಂಡಿಲ್ಲ. ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಿದ್ದವರು ಅವರು’ ಎಂದರು ಕೃಷ್ಣ ಭೈರೇಗೌಡ.

You may also like

Leave a Comment