Island gift to wife: ಹೆಂಡತಿಗಾಗಿ ಶಾಜಹಾನ್ ತಾಜ್ ಮಹಲ್(Taj Mahal) ಕಟ್ಟಿಸಿದ್ದನ್ನು ಕೇಳಿದ್ದೇವೆ. ಹಾಗೆ ಅನೇಕರು ತಮ್ಮ ಪತ್ನಿಗಾಗಿ(Wife) ಎನೆನೋ ಉಡುಗೊರೆ(Gift) ಕೊಟ್ಟದ್ದು ಇದೆ. ಆದರೆ ಇಲ್ಲೊಬ್ಬ ತನ್ನ ಪತಿಗಾಗಿ ಒಂದು ದ್ವೀಪವನ್ನೇ(Island) ಖರೀದಿಸಿ ಅವಳಿಗೆ ಉಡುಗೊರೆಯಾಗಿ ಕೊಟ್ಟಿದ್ದಾನೆ. ಕೋಟಿ ಕೋಟಿ ರುಪಾಯಿ ಖರ್ಚು ಮಾಡಿ ತನ್ನ ಹೆಂಡತಿಗಾಗಿ ಈ ದ್ವೀಪವನ್ನು ಖರೀದಿಸಿದ್ದರ ಹಿಂದಿನ ಕಾರಣ ಕೇಳಿದ್ರೆ ನೀವು ದಂಗಾಗೋದು ಪಕ್ಕಾ.
ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ಸಂಬಂಧಗಳು ಉಳಿಯೋದೇ ಹೆಚ್ಚು. ಅಂತದ್ರಲ್ಲಿ ತನ್ನ ಹೆಂಡತಿಗಾಗಿ ಈ ಗಂಡ ದ್ವೀಪ ಖರೀದಿಸಿದರ ಹಿಂದಿನ ಕಾರಣ ನಿಜಕ್ಕೂ ಅವರಿಬ್ಬರ ಮಧ್ಯೆ ಇರೋ ಪ್ರೀತಿಯನ್ನು ಸಾರಿ ಹೇಳುತ್ತದೆ. ಈ ಮಿಲಿಯನೇರ್ ಗಂಡ ದುಬೈ ಮೂಲದ ಖ್ಯಾತ ಉದ್ಯಮಿ ಜಮಾಲ್ ಅಲ್ ನಡಾಕ್ ತನ್ನ ಹೆಂಡತಿ ಬಿಕಿನಿ(Bikini) ಧರಿಸಿಕೊಂಡು ಆರಾಮವಾಗಿ ಓಡಾಡಲು ಈ ದ್ವೀಪ ಖರೀದಿಸಿದ್ದಾನೆ. ಇತರ ಪಬ್ಲಿಕ್ ಸಮುದ್ರ ತೀರಗಳಲ್ಲಿ ಆಕೆಗೆ ಮುಜುಗರವಾಗಬಾರದು ಎಂದು ತಮ್ಮ ಪತ್ನಿ ಸೌದಿ ಅಲ್ ನಡಾಕ್‌ಗಾಗಿ ಹಿಂದೂ ಮಹಾಸಾಗರದಲ್ಲಿ ದ್ವೀಪವನ್ನು ಖರೀದಿಸಿದ್ದಾರೆ.
ಅದಕ್ಕಾಗಿ ಅವರು 50 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸಿ ಪ್ರಕಾರ 418 ಕೋಟಿ ರೂ. ಪಾವತಿಸಿದ್ದಾರೆ. ಈ ವಿಚಾರವನ್ನು ಜಮಾಲ್ ಅಲ್ ನಡಾಕ್ ಪತ್ನಿ ಸೌದಿ ಅಲ್ ನಡಾಕ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆ ದ್ವೀಪದ ವೀಡಿಯೊವನ್ನು ಸಹ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಬಿಕಿನಿ ಧರಿಸಿ ಹೊರಗೆ ಓಡಾಡಲು ನನಗೆ ಕಷ್ಟವಾದ ಕಾರಣ ನನ್ನ ಪತಿ ದ್ವೀಪವನ್ನು ಖರೀದಿಸಿದ್ದಾರೆ ಎಂದು ಸೌದಿ ಅಲ್ ನಡಾಕ್ ಹೇಳಿದ್ದಾರೆ.
ದಂಪತಿಗಳಿಬ್ಬರೂ ಮುಂದಿನ ಜೀವನಕ್ಕಾಗಿ ದೀರ್ಘಾವಧಿಯ ಹೂಡಿಕೆಯ ಬಗ್ಗೆ ಯೋಚಿಸಿದ್ದೆವು. ಅದೇ ಸಮಯದಲ್ಲಿ ಅವರ ಖಾಸಗಿತನದತ್ತಲೂ ಗಮನ ಹರಿಸಿದ್ದಾರೆ. ಹಾಗಾಗಿ ನಾನು ಸಮುದ್ರತೀರದಲ್ಲಿ ಸುರಕ್ಷಿತವಾಗಿ ಯಾರ ಕಿರಿ ಕಿರಿ ಇಲ್ಲದೆ ವಿಶ್ರಾಂತಿ ಪಡೆಯಬಹುದು ಎಂಬ ಕಾರಣಕ್ಕೆ ದ್ವೀಪವನ್ನು ಖರೀದಿಸುವ ಆಲೋಚನೆ ಮಾಡಿದ್ದಾರೆ. ಈ ದ್ವೀಪವು ಏಷ್ಯಾ ಖಂಡದಲ್ಲಿದೆ. ಆದರೆ ಖಾಸಗಿತನ ಕಾರಣದಿಂದ ಲೋಕೇಶನ್ ಹೇಳೋದಿಲ್ಲ ಎಂದು ಸೌದಿ ಅಲ್ ನಡಾಕ್ ಹೇಳಿಕೊಂಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದ್ವೀಪದ ವಿಡಿಯೋ ಅಂತು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕೇವಲ ಒಂದೇ ವಾರದಲ್ಲಿ 2.4 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯನ್ನು ಕಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ಅಂತು ಭಿನ್ನ ಭಿನ್ನ ಕಮೆಂಟ್‌ಗಳುನ್ನು ಹಾಕುತ್ತಿದ್ದಾರೆ. ಕೇವಲ ಬಿಕಿನಿ ಧರಿಸಲು ಗಂಡನೊಬ್ಬ ತನ್ನ ಹೆಂಡತಿಗಾಗಿ ದ್ವೀಪವನ್ನೇ ಖರೀದಿಸಿರುವ ವಿಷಯ ಎಲ್ಲರನ್ನು ನಿಬ್ಬೆರಗಾಗಿಸಿದೆ.
