Home » Gruha Lakshmi scheme: ಮೂರು ತಿಂಗಳಿಂದ ಬಾರದ ಗೃಹಲಕ್ಷ್ಮೀ ಯೋಜನೆ ಹಣ! ಯೋಜನೆ ನಿಲ್ಲುತ್ತಾ ಅನ್ನೋ ಪ್ರಶ್ನೆಗೆ ಸಚಿವೆ ಏನಂದ್ರು?

Gruha Lakshmi scheme: ಮೂರು ತಿಂಗಳಿಂದ ಬಾರದ ಗೃಹಲಕ್ಷ್ಮೀ ಯೋಜನೆ ಹಣ! ಯೋಜನೆ ನಿಲ್ಲುತ್ತಾ ಅನ್ನೋ ಪ್ರಶ್ನೆಗೆ ಸಚಿವೆ ಏನಂದ್ರು?

0 comments

Gruha Lakshmi scheme: ಗೃಹಲಕ್ಷ್ಮಿ ಯೋಜನೆಯ ಜುಲೈ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ಕೆಲ ದಿನಗಳಲ್ಲೇ ಆಗಸ್ಟ್ ತಿಂಗಳ ಹಣವೂ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿಯಲ್ಲಿ ಇಂದು ಹೇಳಿದರು. ಇದು ನಿರಂತರ ಪ್ರಕ್ರಿಯೆ ಸರ್ಕಾರ ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮೀ ಹಣ ಇನ್ನು ಫಲಾನುಭವಿಗಳ ಕೈಸೇರಿಲ್ಲ. ಸರ್ಕಾರ ಯಾವಾಗ ಬಿಡುಗಡೆ ಮಾಡುತ್ತೆ ಎಂದು ಕಾಯುತ್ತಿರುವುವವರಿಗೆ ಶೀಘ್ರವೇ ಎಂದು ಹೇಳಿದ್ದಾರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.‌ ಆದರೆ ಯಾವಾಗ ಎಂದು ಹೇಳಿಲ್ಲ. ಹಾಗೆ ಎರಡು ತಿಂಗಳ ದುಡ್ಡು ಒಟ್ಟಿಗೆ ಬರುತ್ತದೆ ಎಂದು ನಿರೀಕ್ಷಿಸಿದ್ದ ಮಹಿಳೆಯರಿಗೆ ಸಚಿವೆ ಇಲ್ಲ ಎಂದು ಹೇಳಿದ್ದಾರೆ.

ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮೀ ಹಣವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಫೈಲ್ ನೀಡಲಾಗಿದೆ. ಆದರೆ ಆರ್ಥಿಕ ಇಲಾಖೆಯಿಂದ ಇನ್ನು ಹಣ ಬಿಡುಗಡೆ ಆಗಿಲ್ಲ. ಸಚಿವರ ಹೇಳಿಕೆ ನೋಡಿದರೆ ಇಷ್ಟೋತ್ತಿಗೆ ಹಣಡುಗಡೆಯಾಗಬೇಕಿತ್ತು. ಆದರೆ ಯಾವಾಗ ಬಿಡುಗಡೆ ಆಗುತ್ತೆ ಅನ್ನೋದಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಸಚಿವೆ ಮಾಹಿತಿ ನೀಡಿದ್ದಾರೆ.

You may also like

Leave a Comment