Home » Cm siddaramaiah: ಸಿದ್ದರಾಮಯ್ಯ ಅವರ ಮಧ್ಯರಾತ್ರಿ ಸೀಕ್ರೆಟ್ ಬಿಚ್ಚಿಟ್ಟ ಕುಮಾರಸ್ವಾಮಿ!

Cm siddaramaiah: ಸಿದ್ದರಾಮಯ್ಯ ಅವರ ಮಧ್ಯರಾತ್ರಿ ಸೀಕ್ರೆಟ್ ಬಿಚ್ಚಿಟ್ಟ ಕುಮಾರಸ್ವಾಮಿ!

0 comments

Cm siddaramaiah: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತೊಂದು ವಿಚಾರ ಬಹಿರಂಗ ಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಭಯ ಮತ್ತು ತಲೆಬಿಸಿಯಿಂದ ರಾತ್ರಿಯೆಲ್ಲಾ ನಿದ್ರೆಗೆಟ್ಟು ಕೂತಿದ್ದರು ಎಂದು ಅವರ ಮನೆ ಕೆಲಸದವರೇ ಹೇಳ್ತಾರೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕುಮಾರ ಸ್ವಾಮಿ ಅವರು ಮಾಧ್ಯಮ ಜೊತೆಗೆ ಮಾತನಾಡಿ, ಸಿದ್ದರಾಮಯ್ಯ (Cm siddaramaiah) ನಾನು ಯಾರಿಗೂ ಹೆದರಲ್ಲ ಎಂದು ಬಾಯಿ ಮಾತಿನಲ್ಲಿ ಹೇಳ್ತಾರೆ. ಆದರೆ ಪಾಪ ಅವರ ಮನೆ ಕೆಲಸದವರೇ ಅವರ ಮಧ್ಯರಾತ್ರಿ ಅವಸ್ಥೆ ಯನ್ನು ಹೇಳ್ತಾರೆ. ಸಾಹೇಬ್ರು ರಾತ್ರಿಯೆಲ್ಲಾ ನಿದ್ರೆಗೆಟ್ಟು ಕೂತಿದ್ದರು. ಮಧ್ಯರಾತ್ರಿ ಧಬಕ್ಕನೆ ಎದ್ದು ಡಾಕ್ಟರನ್ನೆಲ್ಲಾ ಕರೆಸಿಕೊಂಡ್ರು. ಬಳಿಕ ಡಾಕ್ಟರಿಗೂ ನೀವು ಎಲ್ಲೂ ಹೋಗಬೇಡಿ ಎಂದು ಹೇಳಿದ್ದರು ಎಂದು ಕುಮಾರಸ್ವಾಮಿ ಲೇವಡಿ ಮಾಡಿ ಹೇಳಿದ್ದಾರೆ.

ಇನ್ನು ನಾನು ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳ್ತಾರಲ್ಲ. ನಾನೇನು ತಪ್ಪು ಮಾಡಿದ್ದೀನಿ. ನನ್ನ ಮೇಲೆ ಏನು ಕೇಸ್ ಇದೆ ಹೇಳಲಿ ನೋಡೋಣ. ಗಂಗೇನಹಳ್ಳಿ ಕೇಸ್ ನಲ್ಲಿ ನನ್ನ ಪಾತ್ರವೇನು? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಈಗಾಗಲೇ ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಕುಮಾರಸ್ವಾಮಿ ಈಗಾಗಲೇ ಲೋಕಾಯುಕ್ತ ಮುಂದೆ ತನಿಖೆಗೆ ಹಾಜರಾಗಿದ್ದಾರೆ. ಅದರ ಬೆನ್ನಲ್ಲೇ ಇಂದು ಅವರು ಪತ್ರಿಕಾಗೋಷ್ಠಿ ನಡೆಸಿ ಸಿದ್ದರಾಮಯ್ಯ ವಿರುದ್ಧ ಈ ಮೇಲಿನಂತೆ ಪ್ರಶ್ನೆ ಮಾಡಿದ್ದಾರೆ.

You may also like

Leave a Comment