Home » Tirupati: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಆಗಿಲ್ವಾ? ಹೀಗೆ ಮಾಡಿದ್ರೆ ತಕ್ಷಣ ದರ್ಶನ ಸಿಗುತ್ತೆ

Tirupati: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಆಗಿಲ್ವಾ? ಹೀಗೆ ಮಾಡಿದ್ರೆ ತಕ್ಷಣ ದರ್ಶನ ಸಿಗುತ್ತೆ

0 comments

Tirupati: ಭೂಲೋಕದ ಒಡೆಯ, ಏಳು ಕುಂಡಲವಾಡ, ವೈಕುಂಠದ ಅಧಿಪತಿ ತಿರುಪತಿ ತಿಮ್ಮಪ್ಪ(Tirupati Timmappa) ನನ್ನು ನೋಡುವುದೇ ಒಂದು ಸೌಭಾಗ್ಯ. ದೇಶದ ಭೂಲೆ ಮೂಲೆಗಳಿಂದ ಬಂದು ಈ ನನ್ನುಪ್ಪನನ್ನು ಕಣ್ತುಂಬಿಕೊಳ್ಳುವುದೇ ಒಂದು ಪುಣ್ಯ. ಸ್ವಾಮಿಯನ್ನು ಒಂದು ಸಲ ನೋಡಿದರೆ ಸಾಕು ಜನ್ಮ ಪಾವನ, ಸಂಕಟ ನಿವಾರಣೆ ಎನ್ನುತ್ತಾರೆ ಭಕ್ತರು.

ಇಲ್ಲಿಗೆ ಬರುವವರು ಹೆಚ್ಚಿನ ಭಕ್ತಾದಿಗಳು ಸಾರ್ವಜನಿಕ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆಯುತ್ತಾರೆ. ಆದರೆ ಹೀಗೆ ದರ್ಶನ ಪಡೆಯುವಾಗ ತಾಸುಗಟ್ಟಲೆ ನಿಲ್ಲಬೇಕು. ಅಥವಾ ದಿನಗಟ್ಟಲೆ ಹಿಡಿಯಬಹುದು. ಒಮ್ಮೊಮ್ಮೆ ಎರಡು, ಮೂರು ದಿನಗಳಾದರೂ ಬೇಕಾಗುತ್ತದೆ. ಹೀಗಿರುವಾಗ ಹೆಚ್ಚಿನವರು ವಿಶೇಷ ದರ್ಶನಕ್ಕೆ ಆನ್ಲೈನ್ ಟಿಕೆಟ್ ಬುಕ್ ಮಾಡುತ್ತಾರೆ.

ಇದೀಗ ದಸರಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಜೊತೆ ತಿರುಪತಿ(Tirupati)ಗೆ ತೆರಳುವ ಭಕ್ತರಿಗೇನೂ ಕಡಿಮೆಯಿಲ್ಲ. ಇಂತಹವರು ಆನ್​ಲೈನ್​ನಲ್ಲಿ ಟಿಕೆಟ್​ ಬುಕ್​ ಮಾಡದಿದ್ದರೂ ಟಿಟಿಡಿ, ಎಸ್‌ಎಸ್‌ಡಿ (ಸ್ಲಾಟೆಡ್ ಸರ್ವ ದರ್ಶನ), ದಿವ್ಯ ದರ್ಶನ, ಉಚಿತ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.

ಈ ಎಸ್​ಎಸ್​ಡಿ ಟಿಕೆಟ್‌ಗಳನ್ನು ತಿರುಪತಿಯ ವಿಷ್ಣು ನಿವಾಸ, ಶ್ರೀನಿವಾಸಂ ಕಾಂಪ್ಲೆಕ್ಸ್, ಭೂದೇವಿ ಕಾಂಪ್ಲೆಕ್ಸ್‌ನಲ್ಲಿ (ತಿರುಮಲದಲ್ಲಿ ಅಲ್ಲ) ಪ್ರತಿದಿನ 3 ಗಂಟೆಗೆ ನೀಡಲಾಗುತ್ತದೆ. ಈ ಟಿಕೆಟ್‌ಗಳನ್ನು ಖರೀದಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಈ ಟಿಕೆಟ್‌ಗಳನ್ನು ನೀಡುವಾಗ ದೇವರ ದರ್ಶನದ ಸಮಯ ಮತ್ತು ಪ್ರವೇಶದ ವಿವರಗಳನ್ನು ಸಹ ನೀಡಲಾಗುತ್ತದೆ.

ಇನ್ನು ಕೆಲವರು ಕಾಲ್ನಡಿಗೆಯಲ್ಲಿ ತಿರುಪತಿಯ ಅಲಿಪಿರಿಯಿಂದ ತಿರುಮಲಕ್ಕೆ ಬೆಟ್ಟ ಹತ್ತಿ ಹೋಗುತ್ತಾರೆ. ಅವರಿಗೆ ಭೂದೇವಿ ಕಾಂಪ್ಲೆಕ್ಸ್ ಮತ್ತು ಶ್ರೀವಾರಿ ಮೆಟ್ಟುಗಳಲ್ಲಿ ದಿವ್ಯ ದರ್ಶನಂ ಟಿಕೆಟ್ ಕೂಡ ನೀಡಲಾಗುತ್ತದೆ. ಈ ಟಿಕೆಟ್‌ಗಳ ಮೂಲಕ ದೇವರ ದರ್ಶನ ಉಚಿತವಾಗಿ ಮಾಡಬಹುದು.

You may also like

Leave a Comment