Home » Sameer Acharya ದಂಪತಿ ಕಲಹ ಪ್ರಕರಣ – ಪೊಲೀಸ್​​ ಠಾಣೆಯಲ್ಲಿ ಬಯಲಾಯ್ತು ಅಸಲಿ ವಿಚಾರ

Sameer Acharya ದಂಪತಿ ಕಲಹ ಪ್ರಕರಣ – ಪೊಲೀಸ್​​ ಠಾಣೆಯಲ್ಲಿ ಬಯಲಾಯ್ತು ಅಸಲಿ ವಿಚಾರ

1 comment

Sameer Acharya: ಸುಂದರವಾದ ಜೀವನ ಸಾಗಿಸುತ್ತಿದ್ದ ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ(Sameer Acharya) ಹಾಗೂ ಶ್ರಾವಣಿ(Shravani) ಸಮೀರ್ ಆಚಾರ್ಯ ದಂಪತಿ ನಡುವೆ ಕಲಹವೇರ್ಪಟ್ಟಿದೆ. ಇದು ಪೋಲೀಸ್ ಠಾಣೆಯ ಮೆಟ್ಟಿಲೇರಿದೆ. ಈ ಬೆನ್ನಲ್ಲೇ ಕಲಹದ ಅಸಲಿ ವಿಚಾರ ಬಯಲಾಗಿದೆ.

ಹೌದು, ಸಮೀರ್ ಆಚಾರ್ಯ ಕುಟುಂಬ ತನ್ನ ಮೇಲೆ ಹಲ್ಲೆ ಮಾಡಿದೆ ಎಂದು ಕುಟುಂಬದ ವಿರುದ್ಧ ಶ್ರಾವಣಿ ಅವರು ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗ ಸೊಸೆ ವಿರುದ್ಧ ದೂರು ನೀಡಲು ಸಮೀರ್ ಅವರ ಫೋಷಕರು ಮುಂದಾಗಿದ್ದರು. ಈ ವೇಳೆ ಪೋಲೀಸರು ಠಾಣೆಯಲ್ಲಿ ನಡೆದ ನಿಜ ಸಂಗತಿ ಬಯಲಾಗಿದೆ.

ಅಷ್ಟಕ್ಕೂ ನಡೆದದ್ದೇನು?
ಮಾಹಿತಿ ಪ್ರಕಾರ ಸಮೀರ್ ಆಚಾರ್ಯ ಅವರ ಮಗಳನ್ನು ಶ್ರಾವಣಿ ಬೆದರಿಸಿದ್ದ ಕಾರಣಕ್ಕೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಮನೆಯಲ್ಲಿ ಆರಂಭವಾಗಿದ್ದ ಈ ಜಗಳ ವಿಕೋಪಕ್ಕೆ ತಿರುಗಿದೆ. ಸಮೀರ್ ಅವರು ಅತ್ತೆ, ಮಾವ ಸೇರಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಶ್ರಾವಣಿ ಅವರು ಇನ್​​​ಸ್ಟಾಗ್ರಾಮ್​ನಲ್ಲಿ ಲೈವ್ ಮಾಡಲು ಹೋಗಿದ್ದಾರೆ. ಲೈವ್ ವಿಡಿಯೋ ಮಾಡುವಾಗ ಸಮೀರ್ ಆಚಾರ್ಯ ಅವರು ಪತ್ನಿ ಶ್ರಾವಣಿ ಅವರ ಫೋನ್ ಒಡೆದು ಹಾಕಿ, ಕೈ – ಮುಖಕ್ಕೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಈ ಗಲಾಟೆಯಲ್ಲಿ ಸಮೀರ್ ತಂದೆ ರಾಘವೇಂದ್ರ ಅವರ ತಲೆಗೂ ಗಾಯಗಳಾಗಿದೆ.

ಸದ್ಯ ಮಹಿಳಾ ಠಾಣೆ ಅಧಿಕಾರಿಗಳು ಕೌನ್ಸ್‌ಲಿಂಗ್ ಮೂಲಕ ದಂಪತಿಯನ್ನ ಒಂದು ಮಾಡಿದ್ದಾರೆ. ಕೊಟ್ಟ ಕಂಪ್ಲೇಂಟ್‌ ವಾಪಸ್ ಪಡೆದು ಮತ್ತೊಮ್ಮೆ ಹೀಗೆ ಮಾಡದಂತೆ ಅರ್ಜಿ ಬರೆದುಕೊಟ್ಟು ವಾಪಸ್ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಇದನ್ನು ನೋಡಿದ ಜನ ಬಾಯಲ್ಲಿ ಭಗವದ್ಗೀತೆ, ತಿನ್ನೋದು ಮಾತ್ರ ಬದನೆಕಾಯಿ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.

You may also like

Leave a Comment