Home » BJP: ಸಿದ್ದು ಸರ್ಕಾರ ಉರುಳಿದರೆ ಬಿಜೆಪಿಯಿಂದ ಮುಖ್ಯಮಂತ್ರಿ ಆಗೋದು ಇವರೇ !! ಯಡಿಯೂರಪ್ಪ, ವಿಜಯೇಂದ್ರ ಯಾರೂ ಅಲ್ಲ, ಮತ್ಯಾರು?

BJP: ಸಿದ್ದು ಸರ್ಕಾರ ಉರುಳಿದರೆ ಬಿಜೆಪಿಯಿಂದ ಮುಖ್ಯಮಂತ್ರಿ ಆಗೋದು ಇವರೇ !! ಯಡಿಯೂರಪ್ಪ, ವಿಜಯೇಂದ್ರ ಯಾರೂ ಅಲ್ಲ, ಮತ್ಯಾರು?

267 comments

BJP: ಸಿದ್ದರಾಮಯ್ಯಗೆ ಮುಡಾ ಕುಣಿಕೆ ದಿನದಿಂದ ದಿನಕ್ಕೆ ಗಟ್ಟಿಯಾಗಿ ಬಿಗಿದುಕೊಳ್ಳುತ್ತಿದೆ. ಈ ನಡುವೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೋ ಇಲ್ಲವೋ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಒಂದು ವೇಳೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿ, ಕಾಂಗ್ರೆಸ್ ಸರ್ಕಾರ ಉರುಳಿದರೆ ಬಿಜೆಪಿಯಿಂದ ಮುಖ್ಯಮಂತ್ರಿ ಆಗೋರು ಇವರೇ ಅಂತೆ !!

ಅದು ಬೇರೆ ಯಾರೂ ಅಲ್ಲ, ಬಿಜೆಪಿ(BJP)ಯ ಪ್ರಬಲ ನಾಯಕ, ಮಾಜಿ ಕೇಂದ್ರ ಸಚಿವ, ಹಿಂದೂ ಫೈರ್ ಬ್ರಾಂಡ್ ಆದ ಬಸವನಗೌಡ ಪಾಟೀಲ್ ಯತ್ನಾಳ್(Basavanagouda Patil Yatnal) ಅವರು. ಯಸ್, ಈ ಕುರಿತು ಸ್ವತಃ ಯತ್ನಾಳ್ ಅವರೇ ಘೋಷಿಸಿಕೊಂಡಿದ್ದು ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಹಳ ದಿನ ಉಳಿಯಲ್ಲ, ಹೀಗಾಗಿ ಬಿಜೆಪಿಯಿಂದ ಮುಂದಿನ ಸಿಎಂ ನಾನೇ ಎಂದು ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ.

ಹೌದು, ಶನಿವಾರ ಸಂಜೆ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ 60 ನೇ ಹಿಂದು ಮಹಾಗಣಪತಿ ವಿಸರ್ಜನೆಯ ಬೃಹತ್ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನತೆಯ ಬೆಂಬಲ ನೋಡಿದ್ರೆ ಬಿಜೆಪಿಯಿಂದ ಮುಂದಿನ ಮುಖ್ಯಮಂತ್ರಿ ನಾನೇ ಆಗ್ತೇನೆ. ರಾಜ್ಯದಲ್ಲಿ ಹಿಂದುಪರ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಅವಧಿಯಲ್ಲಿ ಮೇಲು-ಕೀಳು ಎನ್ನುವುದು ಇರೋದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

You may also like

Leave a Comment