Home » Belthangady: ಮನೆಯಲ್ಲಿ ನಡೆದ ದುರ್ಘಟನೆ, ಕಾರಿನಡಿಗೆ ಸಿಲುಕಿ 4 ನೇ ತರಗತಿ ವಿದ್ಯಾರ್ಥಿ ಸಾವು!

Belthangady: ಮನೆಯಲ್ಲಿ ನಡೆದ ದುರ್ಘಟನೆ, ಕಾರಿನಡಿಗೆ ಸಿಲುಕಿ 4 ನೇ ತರಗತಿ ವಿದ್ಯಾರ್ಥಿ ಸಾವು!

1 comment

Belthangady:  ಕಾರಿನಡಿಗೆ ಸಿಲುಕಿ ನಾಲ್ಕನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಕೊಕ್ಕಡದ ಮಲ್ಲಿಗೆ ಮಜಲ್ ಎಂಬಲ್ಲಿ ಇಂದು ಸಂಜೆ ನಡೆದಿರುವ ಕುರಿತು ವರದಿಯಾಗಿದೆ.

ಕೊಕ್ಕಡ ಸನೀಪದ ಮಲ್ಲಿಗೆ ಮಜಲ್ ನಿವಾಸಿ ಅಬ್ದುಲ್ ಹಮೀದ್ ಎಂಬವರ ಮಗ ನಾಲ್ಕನೇ ತರಗತಿಯ ನವಾಫ್ ಇಸ್ಮಾಯಿಲ್ ಸಾವನ್ನಪ್ಪಿದ ಬಾಲಕನಾಗಿದ್ದಾನೆ.

ವರದಿ ಪ್ರಕಾರ ಕಾರು ಹಿಂದಕ್ಕೆ ತೆಗೆಯುವ ವೇಳೆ ಈ ಅವಘಡ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

You may also like

Leave a Comment