Home » Love jihad: ಲವ್ ಜಿಹಾದ್ ಮಟ್ಟ ಹಾಕದಿದ್ದರೆ ದೇಶಕ್ಕೆ ಗಂಡಾಂತರ ಖಂಡಿತ: ಕೋರ್ಟ್ ಎಚ್ಚರಿಕೆ

Love jihad: ಲವ್ ಜಿಹಾದ್ ಮಟ್ಟ ಹಾಕದಿದ್ದರೆ ದೇಶಕ್ಕೆ ಗಂಡಾಂತರ ಖಂಡಿತ: ಕೋರ್ಟ್ ಎಚ್ಚರಿಕೆ

2 comments

Love jihad: ನಿರ್ದಿಷ್ಟ ಸಮುದಾಯವು ವ್ಯವಸ್ಥಿತವಾಗಿ ನಡೆಸುತ್ತಿರುವ ಲವ್ ಜಿಹಾದ್(Love Jihad) ರಾಷ್ಟ್ರದ ಏಕತೆಗೆ ಭಾರೀ ಗಂಡಾಂತರವೊಡ್ಡಲಿದೆ ಎಂದು ಉತ್ತರ ಪ್ರದೇಶದ(Uttar Pradesh) ಬರೇಲಿಯ ಸ್ಥಳೀಯ ನ್ಯಾಯಾಲಯ(Court) ಕಳವಳ ವ್ಯಕ್ತಪಡಿಸಿದೆ. ನಿರ್ದಿಷ್ಟ ಸಮುದಾಯದ ಸಮಾಜಬಾಹಿರ ಶಕ್ತಿಗಳು ಜನಸಂಖ್ಯಾಬಲದಿಂದ ಮತ್ತು ಅಂತಾರಾಷ್ಟ್ರೀಯ ಷಡ್ಯಂತ್ರ ಮುಖೇನ ಭಾರತದ(India) ವಿರುದ್ಧ ಅಧಿಪತ್ಯ ಸಾಧಿಸಲು ಲವ್ ಜಿಹಾದ್ನಲ್ಲಿ ನಿರತವಾಗಿವೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ಪಾಕಿಸ್ಥಾನ ಮತ್ತು ಬಾಂಗ್ಲಾದಲ್ಲಿ ಹಿಂದುಗಳ ಸ್ಥಿತಿ ತೀರಾ ದಯನೀಯವಾಗಿದೆ. ಹಿಂದು ಹೆಣ್ಮಕ್ಕಳ ಬಲವಂತ ಮತಾಂತರ, ಮಾನಭಂಗ ಪ್ರಕರಣಗಳು ಮಾಮೂಲು. ಅದೇ ಅನ್ಯಾಯ ಸನ್ನಿವೇಶವನ್ನು ಭಾರತದಲ್ಲೂ ಸೃಜಿಸುವ ಹುನ್ನಾರ. ಹಿಂದು ಹುಡುಗಿಯರನ್ನು ಲವ್ ಜಿಹಾದ್ ಬಲೆಗೆ ಕೆಡವಿ ಅಕ್ರಮವಾಗಿ ಮತಾಂತರಿಸಲಾಗುತ್ತಿದೆ ಮತ್ತು ಮೇರೆ ಮೀರಿ ದೌರ್ಜನ್ಯವೆಸಗಲಾಗುತ್ತಿದೆ ಎಂದು ಕ್ಷಿಪ್ರಗತಿ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಆತಂಕ ವ್ಯಕ್ತಪಡಿಸಿದರು.

*ರಾಷ್ಟ್ರಕ್ಕೆ ಗಂಡಾಂತರ:*
ಸುಳ್ಳು ಮಾಹಿತಿ ಬಲದಲ್ಲಿ ಮದುವೆ ಆಮಿಷವೊಡ್ಡಿ ಹಿಂದು ವಿದ್ಯಾರ್ಥಿನಿಯ ಮಾನಭಂಗ ಮಾಡಿದ ಆರೋಪಿ, ದೇವರ್ಣಿಯ ಪ್ರದೇ ಶದ ಜದೌನ್ಪುರ ಗ್ರಾಮವಾಸಿ, 25 ವರ್ಷದ ಮೊಹ ಮ್ಮದ್ ಆಲಿಂಗೆ ಜೀವಾವಧಿ ಶಿಕ್ಷೆ ಘೋಷಣೆ ಸಂದರ್ಭ ನ್ಯಾಯಾಧೀಶರುಮೇಲಿನಂತೆ ಕಳವಳವ್ಯಕ್ತಪಡಿಸಿದರು. ಅಕ್ರಮ ಮತಾಂತರಗಳು ದೇಶದ ಏಕತೆ,ಸಮಗ್ರತೆ ಮತ್ತು ಸಾರ್ವಭೌಮತೆಗೇ ಗಂಡಾಂತರಕಾರಿ ಎಂದ ವರು ಆತಂಕ ವ್ಯಕ್ತಪಡಿಸಿದರು.

*ಮತಾಂತರಕ್ಕೆ ಹರಿದು ಬರುತ್ತಿದೆ ವಿದೇಶಿ ನಿಧಿ:*
ನಿರ್ದಿಷ್ಟ ಮತದ ಸಮಾಜಕಂಟಕರು ಹಿಂದು ಹೆಣ್ಮಕ್ಕಳಿಗೆ ಮಾನಸಿಕ ಒತ್ತಡ ಹೇರುತ್ತಾರೆ ಮತ್ತು ಮದುವೆ, ಆಕರ್ಷಕ ವೃತ್ತಿ ಇದೆ ಎಂಬಿತ್ಯಾದಿ ಆಮಿಷವೊಡ್ಡಿ ಅವರನ್ನು ಮೋಸದಿಂದಲೇ ಮತಾಂತರಿಸುತ್ತಾರೆ. ಈ ಅಕ್ರಮ ಮತಾಂತರ ಚಟುವಟಿಕೆಗಳಿಗೆ ವಿದೇಶದಿಂದಲೂ ಹಣ ಪೂರೈಕೆಯಾಗುತ್ತಿರುವ ಸಾಧ್ಯತೆಗಳಿವೆ. ಈ ಪಿಡುಗನ್ನು ಸಕಾಲದಲ್ಲಿ ಮಟ್ಟ ಹಾಕದಿದ್ದಲ್ಲಿ ಗಂಭೀರ ಪರಿಣಾಮಗಳ ಸಾಧ್ಯತೆ ನಿಚ್ಚಳವೆಂದು ನ್ಯಾಯಾಧೀಶರು ಎಚ್ಚರಿಸಿದ್ದಾರೆ.

You may also like

Leave a Comment