Home » Harshika Poonacha: ಸ್ಯಾಂಡಲ್ ವುಡ್ ಸಿನಿಮಾ ದಂಪತಿಗೆ ಹೆಣ್ಣು ಮಗು ಜನನ!

Harshika Poonacha: ಸ್ಯಾಂಡಲ್ ವುಡ್ ಸಿನಿಮಾ ದಂಪತಿಗೆ ಹೆಣ್ಣು ಮಗು ಜನನ!

0 comments

Harshika Poonacha: ಸ್ಯಾಂಡಲ್‌ವುಡ್‌ (Sandalwood) ನಟಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಪತಿ ಭುವನ್‌ ಪೊನ್ನಣ್ಣ (Bhuvann Ponnanna) ದಂಪತಿಗೆ ಹೆಣ್ಣು ಮಗು ಆಗಿದೆ. ಹೌದು, ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಭುವನ್‌ ಪೊನ್ನಣ್ಣ (Bhuvann Ponnanna) ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಹರ್ಷಿಕಾ ಹೆಣ್ಣು ಮಗುವಿನ ಜನ್ಮ ನೀಡಿದ್ದು, ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಹೆಣ್ಣು ಮಗುವಿನ ಆಗಮನದಿಂದ ಸಂತಸಗೊಂಡಿದ್ದಾರೆ. 

https://www.instagram.com/reel/DAr-1mMC7OZ/?igsh=cHFmZTVlZjd3cWR2

ಸಾಮಾಜಿಕ ಜಾಲತಾಣದಲ್ಲಿ ಪೊನ್ನಣ್ಣ ಅವರು ಅಪ್ಡೇಟ್ ನೀಡಿದ್ದು, ಎಲ್ಲರಿಗೂ ನಮಸ್ಕಾರ, ನಮ್ಮ “ಚೈಕಾರ್ತಿ ಮೂಡಿ” ಜನಿಸಿದ್ದನ್ನು ತಿಳಿಸಲು ಸಂತೋಷ ಪಡುತ್ತಿದ್ದೇವೆ. ಹರ್ಷಿಕಾ ಮತ್ತು ಮಗಳು ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ ಮಗಳು ಹರ್ಷಿಕಾಳಂತೆ ಇದ್ದರೆ ಅವಳ ಪ್ರಕಾರ ಮಗು ನನ್ನ ಕಾಪಿ ಎನ್ನುತ್ತಿದ್ದಾಳೆ. ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

You may also like

Leave a Comment