Home » Dakshina Kannada: ಮನೆಯಲ್ಲಿ ಕತ್ತುಕೊಯ್ದುಕೊಂಡ ಸ್ಥಿತಿಯಲ್ಲಿ ವೃದ್ಧ ಸಾವು; ಪೊಲೀಸರಿಂದ ತನಿಖೆ

Dakshina Kannada: ಮನೆಯಲ್ಲಿ ಕತ್ತುಕೊಯ್ದುಕೊಂಡ ಸ್ಥಿತಿಯಲ್ಲಿ ವೃದ್ಧ ಸಾವು; ಪೊಲೀಸರಿಂದ ತನಿಖೆ

5 comments

Dakshina Kannada: ತಣ್ಣೀರುಪಂತ ಗ್ರಾಮದ ಅಳಕ್ಕೆ ಎಂಬಲ್ಲಿ ವೃದ್ಧರೊಬ್ಬರು ಕತ್ತು ಕೊಯ್ದುಕೊಂಡ ರೀತಿಯಲ್ಲಿ ಮೃತ ಪಟ್ಟಿರುವುದು ವರದಿಯಾಗಿದೆ. ಅ.4 ರಂದು ಈ ಘಟನೆ ಬೆಳಕಿಗೆ ಬಂದಿದ್ದು, ಮೃತಪಟ್ಟ ವ್ಯಕ್ತಿಯನ್ನು ರಾಜೀವ ಪೂಜಾರಿ (72) ಎಂದು ಗುರುತಿಸಲಾಗಿದೆ.

ತನ್ನ ಮನೆಯ ಹಿಂಬಾಗಿಲನಲ್ಲಿ ಕತ್ತಿಯಿಂದ ಕತ್ತಿಗೆ ಕೊಯ್ದುಕೊಂಡ ರೀತಿಯಲ್ಲಿ ಸಾವಿಗೀಡಾಗಿರುವುದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕರು, ಪೂಂಜಾಲಕಟ್ಟೆ ಠಾಣೆಯ ಪೊಲೀಸರು ಹಾಗೂ ಸೀನ್‌ ಆಫ್‌ ಕ್ರೈಂ ತಂಡ ಬೇಟಿ ನೀಡಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment