Home » Viral Post: ‘ನಾಯಿಗಳು ಮತ್ತು ಕನ್ನಡಿಗರಿಗೆ ಪ್ರವೇಶವಿಲ್ಲ..’ – ವೈರಲ್ ಆಯ್ತು ಸೂಪರ್ ಮಾರ್ಕೆಟ್‌ನ ಬೋರ್ಡ್‌ !!

Viral Post: ‘ನಾಯಿಗಳು ಮತ್ತು ಕನ್ನಡಿಗರಿಗೆ ಪ್ರವೇಶವಿಲ್ಲ..’ – ವೈರಲ್ ಆಯ್ತು ಸೂಪರ್ ಮಾರ್ಕೆಟ್‌ನ ಬೋರ್ಡ್‌ !!

367 comments

Viral Post: ‘ಕನ್ನಡ’ ಎಂದರೆ ಸಂಸ್ಕೃತಿ, ಅದೊಂದು ಶಕ್ತಿ, ಅದು ಏಳು ಕೋಟಿ ಜನರ ಜೀವ, ಜೀವನ. ಈ ಭಾಷೆ, ಅದನ್ನಾಡುವ ಜನ, ಇಲ್ಲಿನ ನೆಲ ಅದೆಷ್ಟೋ ಜನರಿಗೆ ನೆಲೆ ಕೊಟ್ಟು, ಹೊಸ ಬದುಕು ಕಟ್ಟಿಕೊಟ್ಟಿದೆ. ಆದರೆ ಕೆಲವು ಹುಳುಗಳು ತಮಗೆ ಬದುಕು ಕೊಟ್ಟವರನ್ನೇ ಅವಮಾನ ಮಾಡುವ, ಕೀಳಾಗಿ ಮಾತನಾಡುವ ಅನೇಕ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದೆ. ಇಂತಹ ಘಟನೆಗಳು ಕನ್ನಡಿಗರನ್ನು ಕೆರಳಿಸುತ್ತಲೇ ಇದೆ. ನೀವು ಕೂಡ ಇಂತದ್ದನ್ನು ಕಂಡು ರೋಷಗೊಂಡಿರುವುದೂ ಉಂಟು. ಆದರೀಗ ಮತ್ತೊಂದು ಇಂತದ್ದೇ ಘಟನೆ ಮರುಕಳಿಸಿದೆ. ಮತ್ತೆ ಕನ್ನಡದ ಜನತೆಯನ್ನು ಕೆರಳಿಸಿದೆ.

ಹೌದು, ‘ಟೀಮ್‌ ಜಾತ್‌ ಅಫೀಶಿಯಲ್‌’ ಎನ್ನುವ ಟ್ವಿಟರ್‌ ಅಕೌಂಟ್‌ನಿಂದ ಪೋಸ್ಟ್‌ ಮಾಡಲಾದ ಆ ಒಂದು ಪೋಸ್ಟ್ ಇದಕ್ಕೆ ಕಾರಣ. ಅದುವೇ ಸೂಪರ್‌ ಮಾರ್ಕೆಟ್‌ವೊಂದರ ಫಲಕದಲ್ಲಿ ಹಾಕಲಾಗಿದೆ ಎನ್ನಲಾದ ”ನಾಯಿಗಳು ಮತ್ತು ಕನ್ನಡಿಗರಿಗೆ ಪ್ರವೇಶವಿಲ್ಲ..’ (Dogs & Kannadigas Not Allowed) ಎಂಬ ಬರಹ. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗೋದು ಮಾತ್ರವಲ್ಲ ಅವರ ರಕ್ತವನ್ನು ಕುದಿಸಿದೆ. ತಾಳ್ಮೆಯ ಕಟ್ಟೆಯನ್ನು ಒಡೆಯುವಂತಹ ಹಂತಕ್ಕೆ ತಲುಪಿಸಿದೆ. ಆದರೆ, ಇದರ ಅಸಲಿಯತ್ತು ಇನ್ನೂ ಪತ್ತೆಯಾಗಿಲ್ಲ.

ಅಂದಹಾಗೆ ‘ಟೀಮ್‌ ಜಾತ್‌ ಅಫೀಶಿಯಲ್‌’ ಎನ್ನುವ ಟ್ವಿಟರ್‌ ಅಕೌಂಟ್‌ನಿಂದ ಪೋಸ್ಟ್‌ ಮಾಡಲಾದ ಈ ಫೋಟೋದಡಿ ‘ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಬರೆಯಲಾಗಿದೆ. ಜೊತೆಗೆ ‘ಮತ್ತೊಮ್ಮೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತಿದ್ದೇನೆ. ಬೇರೊಬ್ಬರು ಇದನ್ನು ‘ಆಜ್ ಡಿಮಾರ್ಟ್‌ ಮೆ ಯೇ ದಿಖಾ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ನಂತರ ನಾನು ಅದನ್ನು ಪೋಸ್ಟ್ ಮಾಡಿದ್ದೇನೆ. ಅಲ್ಲದೆ ಈ ಬಗ್ಗೆ ಸ್ಪಷ್ಟಪಡಿಸುವಂತೆ ನಾನು dmart ಅನ್ನು ಟ್ಯಾಗ್ ಮಾಡಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ಪೋಸ್ಟ್‌ ವೈರಲ್‌ ಆಗಿ, ಬಹುತೇಕ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಕನ್ನಡಿಗರನ್ನು ಇಷ್ಟು ಅವಮಾನ ಮಾಡುತ್ತಿರುವುದು ಯಾರು? ಈ ಸೂಪರ್‌ ಮಾರ್ಕೆಟ್‌ ಎಲ್ಲದೆ? ಎಂದೆಲ್ಲ ಹುಡುಕಾಡಿದ್ದಾರೆ. ಆದರೆ, ಎಲ್ಲಿಯೂ ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಮತ್ತೊಂದೆಡೆ ಇದನ್ನು ಯಾರೋ ಎಡಿಟ್‌ ಮಾಡಿ ಈ ರೀತಿ ಕೃತ್ಯ ಎಸಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಜೋರಾಗಿವೆ.

You may also like

Leave a Comment