Home » Rape Case: 90 ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಲಯ

Rape Case: 90 ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಲಯ

5 comments

Rape Case: 42 ವಿವಿಧ ಅತ್ಯಾಚಾರ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬನಿಗೆ ದಕ್ಷಿಣ ಆಫ್ರಿಕಾದ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ. ಕಳೆದ ಒಂಭತ್ತು ವರ್ಷಗಳಲ್ಲಿ 90 ಹೆಣ್ಣುಮಕ್ಕಳ ಮೇಲೆ ಈತ ಅತ್ಯಾಚಾರವೆಸಗಿದ್ದ. ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ, ಹಲ್ಲೆ ನಡೆಸಿ ಶಿಕ್ಷೆಗೆ ಗುರಿಯಾಗಿದ್ದಾನೆ.

ನಕೋಸಿನತಿ ಫಕತಿ (40 ವರ್ಷ) ಎಂಬಾತನೇ ಈ ಅಪರಾಧಿ. ಈ ವ್ಯಕ್ತಿ ಎಲೆಕ್ಟ್ರಿಷಿಯನ್‌ನಂತೆ ಮನೆಗೆ ನುಗ್ಗಿ ಮಹಿಳೆಯರು, ಹುಡುಗಿಯರ ಜೀವನ ಹಾಳು ಮಾಡಿದ್ದಾನೆ. ಬಾಲಕಿಯರನ್ನು ಅಪಹರಣ ಮಾಡಿ ಅತ್ಯಾಚಾರ ಮಾಡಿದ್ದು, 2012 ರಿಂದ 2021 ರವರೆಗೆ ಈತ ತನ್ನ ಕುಕೃತ್ಯ ಮಾಡಿದ್ದಾನೆ.

ಶಾಲೆಗೆ ಹೋಗುವ ಮಕ್ಕಳ ಮೇಲೆ ಕಣ್ಣಿಡುತ್ತಿದ್ದ ಈತ, ಅವರನ್ನು ಕಿಡ್ನಾಪ್‌ ಮಾಡಿ ಹಿಂಸಾತ್ಮಕ ಮತ್ತು ಅಶ್ಲೀಲ ವಿಡಿಯೋಗಳನ್ನು ತೋರಿಸುತ್ತಿದ್ದ. ಮನೆಯಲ್ಲಿ ಒಬ್ಬಂಟಿಯಾಗಿರುವ ಹುಡುಗಿಯರು, ಮಹಿಳೆಯರನ್ನು ಈತ ಟಾರ್ಗೆಟ್‌ ಮಾಡುತ್ತಿದ್ದ. ಈತ ತನ್ನ ಕುಟುಂಬದ ಸದಸ್ಯರನ್ನು ಕೂಡಾ ಬಿಟ್ಟಿಲ್ಲ. ನ್ಯಾಯಾಮೂರ್ತಿ ಅವರು ಈತ ಕರುಣೆಗೆ ಯೋಗ್ಯನಲ್ಲ. ಅಮಾಯಕ ಮತ್ತು ಅಸಹಾಯಕತೆಯ ಲಾಭ ಪಡೆದಿದ್ದಾನೆ ಎಂದು ಹೇಳಿದ್ದಾರೆ.

You may also like

Leave a Comment