Home » Bigg boss: ಬಿಗ್‌ಬಾಸ್‌ ಮನೆಗೆ ನಟಿ ಮಹಾಲಕ್ಷ್ಮೀ ಪತಿ, ರವೀಂದರ್‌ ಚಂದ್ರಶೇಖರನ್‌ ಸ್ಪರ್ಧಿಯಾಗಿ ಎಂಟ್ರಿ!

Bigg boss: ಬಿಗ್‌ಬಾಸ್‌ ಮನೆಗೆ ನಟಿ ಮಹಾಲಕ್ಷ್ಮೀ ಪತಿ, ರವೀಂದರ್‌ ಚಂದ್ರಶೇಖರನ್‌ ಸ್ಪರ್ಧಿಯಾಗಿ ಎಂಟ್ರಿ!

0 comments

Bigg boss: ಈಗಾಗಲೇ ಕನ್ನಡದಲ್ಲಿ ಬಿಗ್‌ ಬಾಸ್‌ ಸೀಸನ್ 11 ಆರಂಭವಾಗಿ ಒಂದು ವಾರ ಕಳೆದಿದೆ. ಮೊದಲ ಎಲಿಮಿನೇಷನ್‌ ಪ್ರಕ್ರಿಯೆ ಮುಗಿದಿದ್ದು, ಯಮುನಾ ಶ್ರೀನಿಧಿ ಹೊರನಡೆದಿದ್ದಾರೆ. ಇತ್ತ ತಮಿಲಿನಲ್ಲಿಯೂ ಬಿಗ್‌ ಬಾಸ್‌ ಸೀಸನ್‌ 8 ಶುರುವಾಗಿದ್ದು, ಈ ಶೋಗೆ ಅಚ್ಚರಿಯ ಸ್ಪರ್ಧಿಯೊಬ್ಬರು ಎಂಟ್ರಿಕೊಟ್ಟಿದ್ದಾರೆ. ಹೌದು, ಬಿಗ್‌ ಬಾಸ್‌ ತಮಿಳು ಸೀಸನ್ 8 ರ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಕಾಲಿವುಡ್‌ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಎಂಟ್ರಿಕೊಟ್ಟಿದ್ದಾರೆ.

ತಮಿಳಿನ ಬಿಗ್‌ಬಾಸ್‌ಗೆ ಹಿರಿಯ ನಟ ಕಮಲ್ ಹಾಸನ್ ಕಳೆದ ಏಳು ಸೀಸನ್‌ಗಳಲ್ಲಿ ನಿರೂಪಕರಾಗಿದ್ದರು. ಆದರೆ ಈಗ ಅವರ ಸ್ಥಾನಕ್ಕೆ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಆಗಮಿಸಿದ್ದಾರೆ. ಈ ಸಲದ ತಮಿಳಿನ ಸೀಸನ್‌ 8ರಲ್ಲಿ ಒಟ್ಟು 18 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಆದ್ರೆ 18 ಮಂದಿ ಸ್ಪರ್ಧಿಗಳಲ್ಲಿ ರವೀಂದರ್‌ ಚಂದ್ರಶೇಖರನ್‌ ಎಂಟ್ರಿ ಎಲ್ಲರ ಗಮನ ಸೆಳೆದಿದೆ.

ತಮಿಳಿನ ಖ್ಯಾತ ನಿರ್ಮಾಪಕ ಹಾಗೂ ಲಿಬ್ರಾ ಪ್ರೊಡಕ್ಷನ್ಸ್ ಮುಖ್ಯಸ್ಥ ರವೀಂದರ್ ಚಂದ್ರಶೇಖರನ್ ಈ ಹಿಂದೆ ಜನಪ್ರಿಯ ಕಿರುತೆರೆ ನಟಿ ಮಹಾಲಕ್ಷ್ಮಿಯನ್ನು ಮದುವೆಯಾಗಿ ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಮದುವೆ ಬಗ್ಗೆ ಟ್ರೋಲ್‌ಗಳು ಹರಿದಾಡಿದ್ದವು. ಹಣಕ್ಕಾಗಿ ಮಹಾಲಕ್ಷ್ಮಿ, ರವೀಂದರ್ ಅವರನ್ನು ಮದುವೆಯಾಗಿದ್ದಾರೆ ಎಂದು ಟ್ರೋಲ್ ಸಿಕ್ಕಾಪಟ್ಟೆ ಓಡುತ್ತಿತ್ತು.

ಇನ್ನು ಕಳೆದ ವರ್ಷ ವಂಚನೆ ಪ್ರಕರಣದಲ್ಲಿ ರವೀಂದರ್‌ ಚಂದ್ರಶೇಖರ್‌ ಅವರನ್ನು ಬಂಧಿಸಲಾಗಿತ್ತು. ಅದಾದ ಬಳಿಕ ಮಹಾಲಕ್ಷ್ಮಿ ಅವರಿಗೆ ವಿಚ್ಛೇದನ ನೀಡುತ್ತಿದ್ದಾರೆ ಎಂಬ ಸುದ್ದಿಯೂ ಆಗಿತ್ತು . ಆದರೆ, ಅವೆಲ್ಲವೂ ಸುಳ್ಳಾಗಿದ್ದವು.  ಈ ನಡುವೆಯೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ, ಸದ್ಯ ಬಿಗ್ ಬಾಸ್ ಮನೆಯಲ್ಲಿ ಹೇಗಿರ್ತಾರೆ ಅನ್ನೋದೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಅದರಲ್ಲೂ ಕೆಜಿ ಗಟ್ಟಲೆ ಆಹಾರ ತಿನ್ನೋ ಇವರು ಬಿಗ್ ಬಾಸ್ಮ ನೆಯಲ್ಲಿ ಹೇಗಿರ್ತಾರೆ ಅನ್ನೋ ಪ್ರಶ್ನೆಗೆ ನಾವೆಲ್ಲ ಕಾದು ನೋಡಬೇಕಿದೆ.

You may also like

Leave a Comment