Bigg Boss Kannada-11: ಕನ್ನಡ ಬಿಗ್ ಬಾಸ್(Bigg Boss Kannada-11) ಆಟ ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ನಡುವೆ ಮನೆಯೊಳಗೆ ದೆವ್ವದ ಕಾಟ ಎದುರಾಗಿದ್ದು, ಸ್ಪರ್ಧಿಗಳಿಗೆ ನಡುಕ ಶುರುವಾಗಿದೆ.
ಹೌದು, ಬಿಗ್ ಬಾಸ್(Bigg Boss) ಮನೆಯಲ್ಲಿ ದೆವ್ವ ಇದ್ಯಾ!? ಇಂಥದ್ದೊಂದು ಪ್ರಶ್ನೆ ಇದೀಗ ಮನೆ ಮಂದಿಯನ್ನು ಭಯಭೀತಗೊಳಿಸಿದೆ. ಸುಖಾಸುಮ್ಮನೆ ಮನೆಯಲ್ಲಿನ ಪಿಂಗಾಣಿ ತಟ್ಟೆಗಳು ಕೆಳಕ್ಕೆ ಬಿದ್ದು ಒಡೆಯುತ್ತಿವೆ. ಈ ನಿಗೂಢಕ್ಕೆ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ದೆವ್ವದ ಕಾಟ ಶುರುವಾಗಿದೆ ಎಂದು ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಸ್ವರ್ಗ ನಿವಾಸಿಗಳು ಒಂದು ಕಡೆ ಕೂತುಕೊಂಡು ಟಾಸ್ಕ್ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ನಡುವೆ ಇದ್ದಕ್ಕಿದ್ದಂತೆ ತಟ್ಟೆಯೊಂದು ಕೆಳಗೆ ಬಿದ್ದು ಒಡೆದು ಹೋಗಿದೆ. ಇದನ್ನು ನೋಡಿದ ಸ್ಪರ್ಧಿಗಳು ಅತ್ತ ಕಡೆ ಹೋಗಿದ್ದಾರೆ. ತಟ್ಟೆಗಳು ಹೆಂಗೆ ಒಡೆದು ಹೋಗುತ್ತಿದೆ. ಈ ಮನೆಯಲ್ಲಿ ದೆವ್ವ ಇರಬಹುದೆಂದು ಸ್ಪರ್ಧಿಯೊಬ್ಬರು ಗಾಬರಿಯಿಂದ ಮಾತನಾಡಿದ್ದಾರೆ. ಐಶ್ವರ್ಯಾ ಹೆಚ್ಚು ಭಯ ಬಿದ್ದಿದ್ದು, ಈ ಮನೆಯಲ್ಲಿ ಏನೋ ನೆಗೆಟಿವ್ ಶಕ್ತಿಯಿದೆ. ನನ್ನ ತಲೆಯಲ್ಲಿ ಅದೇ ಓಡುತ್ತಿದೆ ಎಂದು ಹೇಳಿದ್ದಾರೆ.
ಇದಕ್ಕೆ ಉಗ್ರಂ ಮಂಜು ಹಾಗೂ ಇತರರು ಇಲ್ಲ ಹಾಗೇನಿಲ್ಲ. ದೆವ್ವ- ಗಿವ್ವಾ ಏನೂ ಇರಲ್ಲ ಎಂದಿದ್ದಾರೆ. ಮತ್ತೊಬ್ಬರು ನೆಗೆಟಿವ್ ಎನರ್ಜಿ ಎಲ್ಲ ಹೋಯಿತು ಅನ್ಕೊಳ್ಳಿ ಎಂದು ಐಶ್ವರ್ಯಾ ಅವರಿಗೆ ಧೈರ್ಯ ತುಂಬಿದ್ದಾರೆ. ಹೀಗೆ ಮಾತನಾಡುವಾಗಲೇ ಸ್ಪರ್ಧಿಗಳ ಮುಂದೆಯೇ ಮತ್ತೊಂದು ತಟ್ಟೆ ಒಡೆದು ಹೋಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
8 ಮಂದಿ ನಾಮಿನೇಟ್ :
ಇನ್ನು ಮುಖಕ್ಕೆ ಮಸಿ ಹಚ್ಚಿಸಿಕೊಳ್ಳುವ ಸ್ಪರ್ಧಿಗಳು ಈ ವಾರದ ನಾಮಿನೇಟ್ ಆಗಲಿದ್ದಾರೆ ಎಂದು ಹೇಳಿದ್ದರು ಬಿಗ್ ಬಾಸ್. ಅದರಂತೆ, ಎರಡನೇ ವಾರ ಮನೆಯಿಂದ ಹೊರ ಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. ಸ್ವರ್ಗ ನಿವಾಸಿಗಳಾದ ತ್ರಿವಿಕ್ರಮ್, ಐಶ್ವಯಾ, ಧನ್‌ರಾಜ್ ಮತ್ತು ರಂಜಿತ್ ನಾಮಿನೇಟ್ ಆದರೆ, ನರಕ ನಿವಾಸಿಗಳಲ್ಲಿ ಅನುಷಾ ರೈ, ಗೋಲ್ಡ್ ಸುರೇಶ್, ಜಗದೀಶ್, ಮಾನಸಾ ಸಂತೋಷ್ ನಾಮಿನೇಟ್ ಆಗಿ ಮುಖಕ್ಕೆ ಮಸಿ ಬಳಿಸಿಕೊಂಡರು. ಈ ಮೂಲಕ ಈ ವಾರ ಒಟ್ಟು 8 ಮಂದಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.
ನಿಗೂಢವಾಗಿ ಒಡೀತಿವೆ ತಟ್ಟೆಗಳು; ಸದಸ್ಯರ ಎದೆಯಲ್ಲಿ ಢವಢವ!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/zLHcHlE2Zg— Colors Kannada (@ColorsKannada) October 9, 2024
