Home » Rathan Tata: ‘ಹೋಗಿ ಬನ್ನಿ…’ ರತನ್ ಟಾಟಾಗೆ ಮಾಜಿ ಪ್ರೇಯಸಿಯಿಂದ ಭಾವುಕ ವಿದಾಯ !! ಯಾರು ಆ ಪ್ರೇಯಸಿ?

Rathan Tata: ‘ಹೋಗಿ ಬನ್ನಿ…’ ರತನ್ ಟಾಟಾಗೆ ಮಾಜಿ ಪ್ರೇಯಸಿಯಿಂದ ಭಾವುಕ ವಿದಾಯ !! ಯಾರು ಆ ಪ್ರೇಯಸಿ?

0 comments

Rathan Tata: ಉದ್ಯಮ ಲೋಕದ ದ್ರುವ ತಾರೆ ರತನ್ ಟಾಟಾ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಹಲವು ಉದ್ಯಮಿಗಳು ಸಂತಾಪ ಸುಚಿಸುತ್ತಿದ್ದಾರೆ. ಈ ನಡುವೆ ರತನ್ ಟಾಟಾ ಅವರ ಮಾಜಿ ಪ್ರೇಯಸಿ ಕೂಡ ಭಾವನಾತ್ಮಕ ವಿಧಾಯ ಹೇಳಿದ್ದಾರೆ.

ಹೌದು, ರತನ್ ಟಾಟಾ(Rathan Tata) ಅವರ ಮಾಜಿ ಪ್ರೇಯಸಿ, ಅವರೊಂದಿಗೆ ಡೇಟಿಂಗ್ ಮಾಡುವುದನ್ನೂ ಒಪ್ಪಿಕೊಂಡಿದ್ದ ನಟಿ ಸಿಮಿ ಗರೆವಾಲ್(Simi Garewal), ಅಪ್ರತಿಮ ಕೈಗಾರಿಕೋದ್ಯಮಿ ನಿಧನದ ನಂತರ ಹೃತ್ಪೂರ್ವಕ ಗೌರವವನ್ನು ಹಂಚಿಕೊಂಡಿದ್ದಾರೆ. ಮಾಜಿ ಪ್ರಿಯತಮನಿಗೆ ವಿದಾಯ ಹೇಳಿರವ ಅವರು ‘ನೀವು ಹೋಗಿದ್ದೀರಿ ಎಂದು ಅವರು ಹೇಳುತ್ತಾರೆ. ನಿಮ್ಮ ನಷ್ಟವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ತುಂಬಾ ಕಷ್ಟ. ವಿದಾಯ ನನ್ನ ಸ್ನೇಹಿತ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೆ 2011ರ ಸಂದರ್ಶನವೊಂದರಲ್ಲಿ ಸಿಮಿ ಗರೆವಾಲ್ ರತನ್ ಟಾಟಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ಅವರು ತಮ್ಮ ಬಾಂಧವ್ಯವನ್ನು ವಿವರಿಸುತ್ತಾ, ‘ರತನ್ ಮತ್ತು ನನ್ನದು ಬಹಳ ಹಿಂದಿನ ಸಂಬಂಧ. ಅವರು ಪರಿಪೂರ್ಣತೆ, ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದಾರೆ. ಅಸಾಧಾರಣ ಮತ್ತು ಪರಿಪೂರ್ಣ ಸಂಭಾವಿತ ವ್ಯಕ್ತಿ. ಹಣ ಅವರಿಗೆ ಎಲ್ಲವೂ ಆಗಿರಲಿಲ್ಲ. ಅವರು ವಿದೇಶದಲ್ಲಿರುವಷ್ಟು ನಿರಾಳರಾಗಿ ಭಾರತದಲ್ಲಿ ಇರಲಿಲ್ಲ’ ಎಂದು ಹೇಳಿಕೊಂಡಿದ್ದರು.

 

You may also like

Leave a Comment