Bumper lottery: ಅದೃಷ್ಟ ಒಂದು ಇದ್ರೆ ಯಾರು ಬೇಕಾದರೂ ಕೋಟ್ಯಧಿಪತಿ ಆಗಬಹುದು. ಅಂತೆಯೇ ಇದೀಗ ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುವ ಬಂಪರ್ ಜಾಕ್ಪಾಟ್ (Bumper lottery) ಮಂಡ್ಯದ ಮೂಲದ ಬೈಕ್ ಮೆಕಾನಿಕ್ ಹೊಡೆದಿದೆ. ಈ ಹಿನ್ನೆಲೆಯಲ್ಲಿ ಮೆಕಾನಿಕ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ನಿವಾಸಿಯಾಗಿರುವ ಅಲ್ತಾಫ್ ಪಾಷಾಗೆ ಕೇರಳದ ಬಂಪರ್ ಲಾಟರಿ ಹೊಡೆದಿದೆ. ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಆಗಿದ್ದು, ಈತನಿಗೆ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಒಲಿದು ಬಂದಿದೆ.
ಈತ ಇತ್ತೀಚಿಗಷ್ಟೆ ಕೇರಳಕ್ಕೆ ಹೋಗಿದ್ದಾಗ 500 ರೂ ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಇದೀಗ 25 ಕೋಟಿ ರೂ. ಲಾಟರಿ ಹೊಡೆದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಹಣದ ಮೂಟೆ ಕಟ್ಟಿಕೊಂಡು ಬರಲು ಕೇರಳದತ್ತ ಹೊರಟ್ಟಿದ್ದಾರೆ. ಅದಕ್ಕೂ ಮೊದಲು ಲಾಟರಿ ಹೊಡೆದಿರುವ ಬಗ್ಗೆ ಮಾಧ್ಯಮದ ಜತೆ ಅಲ್ತಾಫ್ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.
