Home » Wife Harassment: ಹೆಂಡತಿಯಿಂದ ಗಂಡನಿಗೆ ಸಿಕ್ಕಾಪಟ್ಟೆ ಲೈಂಗಿಕ ಕಿರುಕುಳ- ಆತ್ಮಹತ್ಯೆಗೆ ಯತ್ನಿಸಿದ ಪತಿರಾಯ !!

Wife Harassment: ಹೆಂಡತಿಯಿಂದ ಗಂಡನಿಗೆ ಸಿಕ್ಕಾಪಟ್ಟೆ ಲೈಂಗಿಕ ಕಿರುಕುಳ- ಆತ್ಮಹತ್ಯೆಗೆ ಯತ್ನಿಸಿದ ಪತಿರಾಯ !!

0 comments

Wife Harassment: ಗಂಡಸರಿಂದ, ಗಂಡಂದಿರಿಂದ ಮಹಿಳೆಯರಿಗೆ, ಹೆಂಡತಿಯರಿಗೆ ಲೈಂಗಿಕ ಕಿರುಕುಳ, ದೌರ್ಜನ್ಯ ನಡೆಯುವುದು ಸಾಮಾನ್ಯ. ಆದರೆ ಇಲ್ಲೊಂದೆಡೆ ಹೆಂಡತಿಯಿಂದಲೇ ಗಂಡನಿಗೆ ಲೈಂಗಿಕ ಕಿರುಕುಳ ನಡೆಯುತ್ತಿದ್ದು, ಇದರಿಂದ ಬೇಸತ್ತ ಗಂಡ ಆತ್ಮಹತ್ಯೆಗೆ ಯತ್ನಿಸಿದಂತ ವಿಚಿತ್ರ ಘಟನೆ ನಡೆದಿದೆ.

ಹೌದು, ಕೈಹಿಡಿದ ಧರ್ಮಪತ್ನಿಯ ಲೈಂಗಿಕ ಕಿರುಕುಳ(Wife Harassment) ತಾಳಲಾರದೆ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅಮರಾವತಿಯ ಕಾಕಿನಾಡದಲ್ಲಿ ನಡೆದಿದ್ದು, ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಅಂದಹಾಗೆ ಆತನ ಹೆಂಡತಿ ರಾತ್ರಿಯಾದರೆ ಸಾಕು ನಾವು ಹೇಗೆಲ್ಲ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪೀಡಿಸುತ್ತಾಳೆ. ಆಕೆಯ ಮನೆಯವರು ಕೂಡ ಕಿರುಕುಳ ನೀಡುತ್ತಾರೆ ಎಂಬುದನ್ನು ವಿವರಿಸಿ, ತಾನು ನಿತ್ಯ ಎಷ್ಟು ಮಾನಸಿಕ ಯಾತನೆ ಅನುಭವಿಸುತ್ತಿದ್ದೇನೆ ಮೂರು ಪುಟಗಳ ಪತ್ರ ಬರೆದಿಟ್ಟಿದ್ದಾನೆ.

ಅಲ್ಲದೆ ಪತ್ನಿಯ ನಡತೆ ಚೆನ್ನಾಗಿಲ್ಲ, ಮದುವೆಯಾದ ಮೇಲೆ ಆಕೆ ತನ್ನ ಸೋದರ ಮಾವನ ಜೊತೆ ಅಕ್ರಮ ಸಂಬಂಧ ಮುಂದುವರಿಸಿದ್ದಾಳೆ. ನಿತ್ಯ ಅವನ ಜೊತೆ ಹೋಗಿ ಮತ್ತೆ ಮನೆಗೆ ಬಂದು ಅಕ್ಕಪಕ್ಕದವರ ಜತೆ ನನ್ನನ್ನು ಮೂದಲಿಸುತ್ತ ಹರಟೆ ಹೊಡೆಯುತ್ತಿರುತ್ತಾಳೆ. ರಾತ್ರಿ ವೇಳೆ ತನಗೆ ತಡೆದುಕೊಳ್ಳಲಾರದಷ್ಟು ಲೈಂಗಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಸಂತ್ರಸ್ತ ಪತ್ರದಲ್ಲಿ ಬರೆದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

You may also like

Leave a Comment