Home » Bank Account: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದವರಿಗಿನ್ನು ಬೀಳುತ್ತೆ ದಂಡ ?! ಖಾತೆದಾರರಿಗೆ ಮಹತ್ವದ ಸೂಚನೆ !!

Bank Account: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದವರಿಗಿನ್ನು ಬೀಳುತ್ತೆ ದಂಡ ?! ಖಾತೆದಾರರಿಗೆ ಮಹತ್ವದ ಸೂಚನೆ !!

309 comments

Bank Account: ಈಗಿನ ಕಾಲದಲ್ಲಿ, ಜನ ಹೆಚ್ಚಾಗಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನ ಇಟ್ಟಿರ್ತಾರೆ. ಸರ್ಕಾರದ ಸ್ಕೀಮ್‌ಗಳ ಲಾಭ ಪಡೆಯೋಕೆ ಬ್ಯಾಂಕ್ ಖಾತೆ(Bank Account) ಇರೋದು ಮುಖ್ಯ. ಆದರೀಗ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದವರಿಗೆ ದಂಡ ಹಾಕಲಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡ್ತಿದೆ. ಇದೀಗ ಈ ಕುರಿತು PIB ತನ್ನ ನಿಲುವನ್ನು ಸ್ಪಷ್ಟೀಕರಿಸಿದೆ.

ಹೌದು, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ವೈರಲ್ ಆಗಿ ಜನರಲ್ಲಿ ಆತಂಕ ಮೂಡಿಸಿದೆ. ಆದರೀಗ ಸರ್ಕಾರದ ಪತ್ರಿಕಾ ಸಂಸ್ಥೆ, ಪಿಐಬಿ ಈ ಸುದ್ದಿಯ ಹಿಂದಿನ ಸತ್ಯವನ್ನ ಬಯಲು ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಸುದ್ದಿ ನಿಜಾನಾ ಸುಳ್ಳಾನಾ ಅಂತ ಪರಿಶೀಲಿಸಿ ವರದಿ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯು “ಕೆಲವು ಲೇಖನಗಳಲ್ಲಿ ಆರ್‌ಬಿಐ ಹೊಸ ನಿಯಮದ ಪ್ರಕಾರ, ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ರೆ ದಂಡ ಅಂತ ಸುಳ್ಳು ಸುದ್ದಿ ಹಬ್ಬಿಸಲಾಗ್ತಿದೆ. ಆರ್‌ಬಿಐ ಅಂತ ಯಾವ ನಿಯಮವನ್ನೂ ಹೊರಡಿಸಿಲ್ಲ. ಇಂಥ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ!” ಅಂತ ಹೇಳಿದೆ.

ಇಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿದಂಗೆ ಆರ್‌ಬಿಐ ಯಾವ ನಿಯಮವನ್ನೂ ಹೊರಡಿಸಿಲ್ಲ ಅಂತ ಸ್ಪಷ್ಟಪಡಿಸಿದೆ. ಜನರಲ್ಲಿ ಗೊಂದಲ ಮೂಡಿಸೋ ಇಂಥ ವೈರಲ್ ಪೋಸ್ಟ್‌ಗಳನ್ನ ನಿರಂತರವಾಗಿ ಗಮನಿಸ್ತಿದೆ ಅಂತಲೂ ಹೇಳಿದೆ.

You may also like

Leave a Comment