Home » Toilet Cleaning: ಎಷ್ಟ್ ತೊಳೆದರೂ ನಿಮ್ಮ ಮನೆಯ ಟಾಯ್ಲೆಟ್ ಕ್ಲೀನ್ ಆಗ್ತಿಲ್ವಾ? ತೆಂಗಿನ ಚಿಪ್ಪನ್ನು ಬಳಸಿ ಫಳ ಫಳ ಹೊಳೆಯುವಂತೆ ಮಾಡಿ !!

Toilet Cleaning: ಎಷ್ಟ್ ತೊಳೆದರೂ ನಿಮ್ಮ ಮನೆಯ ಟಾಯ್ಲೆಟ್ ಕ್ಲೀನ್ ಆಗ್ತಿಲ್ವಾ? ತೆಂಗಿನ ಚಿಪ್ಪನ್ನು ಬಳಸಿ ಫಳ ಫಳ ಹೊಳೆಯುವಂತೆ ಮಾಡಿ !!

3 comments

Toilet Cleaning: ಮನೆಯಲ್ಲಿ ಬಾತ್ ರೂಮ್, ಟಾಯ್ಲೆಟ್ ತೊಳೆದು ಕ್ಲೀನ್( Toilet Cleaning)ಮಾಡೋದೇ ಮನೆಮಂದಿಗೆ ದೊಡ್ಡ ಸಾಹಸ ಮಾಡಿದಂತೆ. ಯಾಕೆಂದರೆ ಅದನ್ನು ಎಷ್ಟೇ ತೊಳೆದರೂ ಅದು ತೊಳೆದಂತೆ ಭಾಸವಾಗವುದಿಲ್ಲ. ಎಷ್ಟು ಉಜ್ಜಿದರೂ ತೊಳೆಯದಂತೆ ತೋರುತ್ತದೆ. ಆದರೆ ನಾವು ಹೇಳೋ ಈ ಟಿಪ್ಸ್ ಬಳಸಿದರೆ ನಿಮ್ಮ ಮನೆಯ ಟಾಯ್ಲೆಟ್ ಅನ್ನು ಪಳ ಪಳ ಹೊಳೆಯುವಂತೆ ಮಾಡಬಹುದು.

ಹೌದು, ನೈಸರ್ಗಿಕವಾಗಿ ಸಿಗೋ ತೆಂಗಿನ ಚಿಪ್ಪು ಬಳಸಿ ನಿಮ್ಮ ಮನೆಯ ಟಾಯ್ಲೆಟ್ ಅನ್ನು ಪಳ ಪಳ ಹೊಳೆಯುವಂತೆ ಮಾಡಬಹುದು. ಹೇಗಪ್ಪಾ ಇದು ಸಾಧ್ಯ ಅಂತ ಯೋಚಿಸ್ತಿದ್ದೀರಾ? ನಿಜ ಕಣ್ರೀ, ತೆಂಗಿನ ಚಿಪ್ಪು ನಿಮ್ಮ ಮನೆಯ ಶೌಚಾಲಯವನ್ನು ಅಷ್ಟು ಸ್ವಚ್ಛ ಮಾಡಿಬಿಡುತ್ತೆ. ಹೇಗೆ ಅಂತ ನಾವ್ ಹೇಳ್ತೀವಿ ಕೇಳಿ.

ನಿಮ್ಮ ಮನೆಯಲ್ಲಿ ತೆಂಗಿನಕಾಯಿಯ ಚಿಪ್ಪು ಇದ್ದೇ ಇರುತ್ತೆ, ಮೊದಲು ಅದನ್ನು ಸುಟ್ಟು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಲೋಟಕ್ಕೆ ಹಾಕಿಕೊಂಡು ಸ್ವಲ್ಪ ನೀರು, ಸ್ವಲ್ಪ ಅಡುಗೆ ಸೋಡಾ, 1 ಚಮಚ ಉಪ್ಪು ಮತ್ತು ಈನೋ ಹಾಗೆ ಡಿಶ್‌ವಾಶ್ ಲಿಕ್ವಿಡ್ ಹಾಕಿಕೊಳ್ಳಿ ಬಳಿಕ ಅರ್ಧ ಲೋಟದಷ್ಟು ವಿನೆಗರ್ ಹಾಕಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಒಂದು ಸಣ್ಣ ಬಾಟಲ್‌ಗೆ ಇದನ್ನು ಹಾಕಿಕೊಳ್ಳಿ, ಮುಚ್ಚಳವನ್ನು ತೂತು ಮಾಡಿಕೊಳ್ಳಿ, ಬಳಿಕ ನಿಮ್ಮ ಟಾಯ್ಲೆಟ್‌ಗೆ ಇದನ್ನು ಹಾಕಿ ಸ್ವಲ್ಪ ಹೊತ್ತು ಹಾಗೆ ಬಿಡಿ. ನಂತರ ನೀವು ಟಾಯ್ಲೆಟ್‌ನ ವಾಟರ್ ವಾಶ್ ಮಾಡಿದ್ರೆ ಟಾಯ್ಲೆಟ್ ಪಳ ಪಳ ಅಂತ ಹೊಳೆಯುತ್ತಿರುತ್ತೆ. ನೀವು ಟ್ರೈ ಮಾಡಿ ನೋಡಿ.

You may also like

Leave a Comment