Home » Sullia : ಎರಡು ಬೈಕ್‌‌ಗಳ ನಡುವೆ ಅಪಘಾತ ,ಓರ್ವ ಸಾವು

Sullia : ಎರಡು ಬೈಕ್‌‌ಗಳ ನಡುವೆ ಅಪಘಾತ ,ಓರ್ವ ಸಾವು

0 comments

ಮಂಗಳೂರು : ಸುಳ್ಯದ ಪೈಚಾರು ಸಮೀಪದ ಆರ್ತಾಜೆ ಬಳಿ ಎರಡು ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಒಂದು ಬೈಕಿನ ಸವಾರನನ್ನು ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

 

ಇನ್ನೊಂದು ಬೈಕಿನಲ್ಲಿ ಇದ್ದ ಇಬ್ಬರು ಸವಾರರೂ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಐವರ್ನಾಡು ಪ್ರಾ.ಕೃ.ಪ.ಸ.ಸಂಘದಲ್ಲಿ ಲೆಕ್ಕಿಗರಾಗಿ ಕೆಲಸ ನಿರ್ವಹಿಸುತ್ತಿದ್ದ ಬೋಜಪ್ಪ ಗೌಡ ಪಾಲೆಪ್ಪಾಡಿ ಎಂದು ಗುರುತಿಸಲಾಗಿದೆ.
ಗಾಯಗೊಂಡವರು ಅರುಣ್ ಎಲಿಮಲೆ ಹಾಗೂ ವಸಂತ ಸೇವಾಜೆ ಎಂದು ತಿಳಿದುಬಂದಿದೆ.

ಮೃತ ಬೋಜಪ್ಪ ಗೌಡರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಸಹೋದರಿ, ಮೂವರು ಸಹೋದರರನ್ನು ಅಗಲಿದ್ದಾರೆ.

You may also like

Leave a Comment