Home » Kalaburagi: ಚೆಕ್ ಡ್ಯಾಂಗೆ ಕಿಡಿಗೇಡಿಗಳಿಂದ ಕ್ರೀಮಿನಾಶಕ ಸೇರ್ಪಡೆ: ಅಪಾಯದ ಅಂಚಿನಲ್ಲಿ ಗ್ರಾಮಸ್ಥರು

Kalaburagi: ಚೆಕ್ ಡ್ಯಾಂಗೆ ಕಿಡಿಗೇಡಿಗಳಿಂದ ಕ್ರೀಮಿನಾಶಕ ಸೇರ್ಪಡೆ: ಅಪಾಯದ ಅಂಚಿನಲ್ಲಿ ಗ್ರಾಮಸ್ಥರು

by ಹೊಸಕನ್ನಡ
3 comments

Kalaburagi: ಕಿಡಿಗೇಡಿಗಳು ಎರಡು ಚೆಕ್ ಡ್ಯಾಂಗಳಿಗೆ ಕ್ರೀಮಿನಾಶಕ ಔಷಧಿ ಬೆರೆಸಿದ್ದು, ಮೀನುಗಳು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿ ಬೋನಸ್‌ಪುರ ಮತ್ತು ಮೊಗದಂಪುರದಲ್ಲಿ ನಡೆದಿದೆ.

ಇದೀಗ ಎರಡು ಚೆಕ್ ಡ್ಯಾಂಗಳಿಗೆ (Kalaburagi) ಕ್ರಿಮಿನಾಶಕ ಔಷಧಿ ಸೇರ್ಪಡೆ ಹಿನ್ನೆಲೆ, ನೀರು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಅಪಾರ ಮೀನುಗಳ ಮಾರಣ ಹೋಮವಾಗಿದೆ. ಯಾರೋ ದುಷ್ಕರ್ಮಿಗಳು ಚೆಕ್ ಡ್ಯಾಂನಲ್ಲಿರುವ ನೀರಿಗೆ ರಾಸಾಯನಿಕ ಕ್ರಿಮಿನಾಶಕ ಸೇರ್ಪಡೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಬೋನಸ್‌ಪುರ ಮತ್ತು ಮೊಗದಂಪುರ ಗ್ರಾಮದ ಜನರಲ್ಲಿ ಆತಂಕ ನಿರ್ಮಾಣವಾಗಿದೆ.

ಇನ್ನು ಜಾನುವಾರುಗಳು ಮತ್ತು ರೈತರು ಕುಡಿಯಲು ಬಳಸುವ ನೀರಿಗೆ ವಿಷ ಸೇರ್ಪಡೆ ಹಿನ್ನೆಲೆ, ಸ್ಥಳಕ್ಕೆ ಚಿಂಚೋಳಿ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

You may also like

Leave a Comment