Bigg Boss: ಕನ್ನಡದ ‘ಬಿಗ್ ಬಾಸ್’ ಮನೆಯಲ್ಲಿ ಹೊಡೆದಾಟ, ಬಡಿದಾಟ ನಡೆದಿದ್ದು, ದೈಹಿಕ ಹಲ್ಲೆ ನಡೆಸಿ, ಸ್ತ್ರೀಯರ ನಿಂದನೆ ಮಾಡಲಾಗಿದೆ. ಹೀಗಾಗಿ ಮೂಲ ನಿಯಮ ಮುರಿದ ಪರಿಣಾಮ ಜಗದೀಶ್ ಹಾಗೂ ರಂಜಿತ್ ಅವರನ್ನು ಬಿಗ್ ಮನೆಯಿಂದ ಹೊರಹಾಕಿದೆ.
ಹೌದು, ಲಾಯರ್ ಜಗದೀಶ್ (Lawyer Jagadish) ಅಂತೂ ಮನೆಯಲ್ಲಿ ಸೌಂಡ್ ಮಾಡೋ ಸ್ಪರ್ಧಿ ಆಗಿದ್ದಾರೆ. ಆದರೆ ಅವರ ಸೌಂಡ್ ಯಾರಿಗೂ ಇಷ್ಟವಾಗುತ್ತಿಲ್ಲ. ಒಂದೊಂದು ಹೊತ್ತು ಒಂದೊಂದು ರೀತಿ ಇರುವ ಅವರು ಹಲವಾರು ಸಲ ಹೆಣ್ಮಕ್ಕಳ ಬಗ್ಗೆ ಸಲೀಸಾಗಿ ಮಾತನಾಡಿದ್ದಾರೆ ಎನ್ನುವ ಕೋಪ ಮನೆಯಲ್ಲಿರುವ ತುಂಬಾ ಜನರಿಗಿದೆ. ನಟಿ ಗೌತಮಿ ಅವರು ಲಾಯರ್ ಜಗದೀಶ್ ಬಗ್ಗೆ ಮಾತನಾಡಿ ಅವರಿಗೆ ಹೆಣ್ಮಕ್ಕಳನ್ನು ಗೌರವಿಸುವ ಬೇಸಿಕ್ ಕೂಡಾ ಗೊತ್ತಿಲ್ಲ ಎಂದು ಕಟುವಾಗಿ ಹೇಳಿದ್ದಾರೆ. ಗೌತಮಿ ಮಾತ್ರವಲ್ಲದೆ ಮನೆ ಮಂದಿಯಲ್ಲಿರುವ ಇತರ ಮಹಿಳಾ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ, ಹಂಸ, ಮಾನಸ ಕೂಡಾ ಲಾಯರ್ ಮೇಲೆ ಗರಂ ಆಗಿದ್ದಾರೆ.
ಇನ್ನು ಉಗ್ರಂ ಮಂಜು ಹಾಗೂ ಜಗದೀಶ್ ಜಗಳ ಆಡುತ್ತಿರುತ್ತಾರೆ. ಆಗ ರಂಜಿತ್ ಹಿಂದೆ ನಿಂತಿರುತ್ತಾರೆ. ಬೇಕು ಅಂತಲೇ ರಂಜಿತ್ ಬಂದು ಜಗದೀಶ್ ಅವರಿಗೆ ಬಂದು ಗುದ್ದಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೀಗಾಗಿ ಇದು ಸಾಭೀತಾಗಿರುವ ಕಾರಣ ಬಿಗ್ಬಾಸ್ ಲಾಯರ್ ಜಗದೀಶ್ ಹಾಗೂ ರಂಜಿತ್ ಅವರನ್ನು ಮನೆಯಿಂದ ಹೊರಗೆ ಹೋಗುವಂತೆ ಆದೇಶಿಸಿದ್ದಾರೆ.
ರಂಜಿತ್ ಹಾಗೂ ಜಗದೀಶ್ ಅವರನ್ನು ಹೊರಕ್ಕೆ ಕಳಿಸಲು ಬಿಗ್ ಬಾಸ್ ಆದೇಶ ಕೊಟ್ಟ ಪ್ರೋಮೋ ವಿಡಿಯೋ ವೈರಲ್ ಆಗುತ್ತಿದೆ. ಅಲ್ಲದೆ ನಿನ್ನೆ ದಿನ ಮುಂದಿನ ಸಂಚಿಕೆಯ ತುಣುಕಿನಲ್ಲಿ ಜಗದೀಶ್ ಮತ್ತು ರಂಜಿತ್ ಬ್ಯಾಗ್ ಪ್ಯಾಕ್ ಮಾಡುತ್ತಿದ್ದಾರೆ. ಅಲ್ಲದೆ ಅವರು ಮನೆಯಿಂದ ಹೊರ ಹೋಗಿರುವುದು ಫಿಕ್ಸ್ ಆಗಿದೆ ಎನ್ನಲಾಗಿದೆ.
ಆದರೆ ಇಂದಿನ ಎಪಿಸೋಡ್‌ನಲ್ಲಿ ಇದನ್ನು ತೋರಿಸಲಾಗುತ್ತಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಈ ಇಬ್ಬರು ಸ್ಪರ್ಧಿಗಳು ಈವರೆಗೆ ಮನೆಗೆ ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ಬಿಗ್ ಬಾಸ್ನಿಂದ ಬಂದವರು ಎಲ್ಲಿ ಹೋಗಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದ್ದು, ಕೆಲವು ಮಾಹಿತಿಗಳ ಪ್ರಕಾರ ಅವರನ್ನು ಸೀಕ್ರೆಟ್ ರೂಂನಲ್ಲಿ ಇರಿಸಿ ಆಟದ ಬಗ್ಗೆ ಮತ್ತೊಮ್ಮೆ ವಿವರಿಸುವ ಪ್ರಯತ್ನವಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಮತ್ತೆ ಈ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್‌ಗೆ ರೀ-ಎಂಟ್ರಿ ಕೊಡುವ ಸಾಧ್ಯತೆ ಕೂಡ ಹೆಚ್ಚಾಗಿದೆ.
